ಶ್ರೀ ಅಣ್ಣಮ್ಮ ದೇವಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಹಳೆ ವಿಮಾನ ರಸ್ತೆಯಲ್ಲಿನ ನಂಜಾ ರೆಡ್ಡಿ ಕಾಲೊನಿಯಲ್ಲಿ ಶುಕ್ರವಾರ 26ನೇ ವರ್ಷದ ಅಣ್ಣಮ್ಮ ದೇವಿ ಉತ್ಸವ ವಿಜೃಂಭಣೆಯಾಗಿ ಜರುಗಿತು. ಉತ್ಸವ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಅಷ್ಟಲಕ್ಷ್ಮಿ ಹೋಮ ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.