ಜಿಲ್ಲೆ

ಶ್ರೀಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಸೋಮನಾಥ ರೆಡ್ಡಿ

ಗಜೇಂದ್ರಗಡ: ತಾಲೂಕಿನ ನರೇಗಲ್ ಪಟ್ಟಣದ ಅಭಿನವ ಅನ್ನದಾನೇಶ್ವರ ಪಿಯು ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಜೇಂದ್ರಗಡ ತಾಲೂಕು ಮಟ್ಟದ ಪಿಯು ಕಾಲೇಜ್‌ಗಳ ಕ್ರೀಡಾಕೂಟದಲ್ಲಿ ಗಜೇಂದ್ರಗಡದ ಶ್ರೀಅನ್ನದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಗೆಲುವು ಸಾಧಿಸುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಎತ್ತರ ಜಿಗಿತದಲ್ಲಿ ಪ್ರದೀಪ ಹುಣಸಿಮರದ ಪ್ರಥಮ, ಉದ್ದ ಜಿಗಿತದಲ್ಲಿ ಸಾಗರ ಮಾರಲಬಾವಿ ದ್ವಿತೀಯ, 400ಮೀ ಓಟದಲ್ಲಿ ಪರಶುರಾಮ ಜಾಧವ ದ್ವಿತೀಯ, ಗುಂಡು ಎಸೆತದಲ್ಲಿ ಯಶವಂತ ಮಾದರ ಪ್ರಥಮ, 5 ಕಿಮೀ ನಡಿಗೆಯಲ್ಲಿ ಗಂಗಾಧರ ಓಲೇಕಾರ ತೃತೀಯ, ಉದ್ದ ಜಿಗಿತದಲ್ಲಿ ಸುಶ್ಮಿತಾ ಭೋವಿ ತೃತೀಯ, ಭರ್ಚಿ ಎಸೆತದಲ್ಲಿ ಸೀತಾ ಜೋಗಿ ತೃತೀಯ ಸ್ಥಾಪ ನಡೆದಿದ್ದಾರೆ.

ಬಾಲಕರ ಶೆಟಲ್ ಬ್ಯಾಡ್ಮಿಂಟನ್ ಪ್ರಥಮ, ಬಾಲಕೀಯರ ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಹಾಗೂ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾಲೇಜ್‌ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಾಚಾರ್ಯ ವಸಂತರಾವ್ ಗಾರಗಿ, ‘ಗಜೇಂದ್ರಗಡದಲ್ಲಿರುವ ಕಾಲೇಜ್ ದಶಮಾನೋತ್ಸವ ಸಂಭ್ರಮದಲ್ಲಿದೆ. 10 ವರ್ಷದಲ್ಲಿ ಪರೀಕ್ಷೆ ವಿಭಾಗದಲ್ಲಿ ಸಾಧನೆ ಮಾಡುತ್ತಿದ್ದ ನಮ್ಮ ವಿದ್ಯಾರ್ಥಿಗಳು ಈಗ ಕ್ರೀಡಾ ವಿಭಾಗದಲ್ಲೂ ಮುಂದಿದ್ದಾರೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ರವಿ ಹಲಗಿ, ಸಂಗಮೇಶ ವಸ್ತ್ರದ, ಜಿ.ಟಿ. ರಾಯಬಾಗಿ, ಪ್ರತಿಭಾ ಲಕ್ಷಕೊಪ್ಪದ, ಸಂಗೀತಾ ನಾಲತವಾಡ, ಜಾಸ್ಮೀನ ಇಟಗಿ, ಗೋಪಾಲ ರಾಯಬಾಗಿ, ಸಂಗಮೇಶ ವಸ್ತ್ರದ, ವಿಜಯಲಕ್ಷ್ಮೀ ಅರಳಿಕಟ್ಟಿ, ಬಸವಂತಗೌಡ ಸಂಕದಾಳ, ಎಂ. ಎನ್. ಕೊಳ್ಳಿ, ಪ್ರಶಾಂತ ಗಾಳಪೂಜಿಮಠ, ಪ್ರಮೋದ ಅಬ್ಬಿಗೇರಿ ಇದ್ದರು.