ಮುಷ್ಟೂರು ಶ್ರೀ ಆಂಜಿನೇಯ ದೇವಸ್ಥಾನದ ಹೊರನೋಟ. 
ಜಿಲ್ಲೆ

ಶ್ರೀ ಆಂಜಿನೇಯ ದೇವಸ್ಥಾನ ಉದ್ಘಾಟನೆ ಆ.4ರಂದು

ನರೇಶ್ ಕುಮಾರ್

ದೇವದುರ್ಗ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ದೇವಸ್ಥಾನ ಉದ್ಘಾಟನೆ, ಪಂಚ ಕಲಶಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಆ.4ರಂದು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ ಶ್ರೀ ಆಂಜನೇಯ ದೇವರಿಗೆ ರುದ್ರಾಭಿಷೇಕ, ಹೋಮ-ಹವನ ಸೇರಿ ವಿವಿಧ ಪೂಜೆಗಳು, ಪ್ರಾಣ ಪ್ರತಿಷ್ಠಾಪನೆ, ಮುತ್ತೈದೆಯರಿಂದ ಕುಂಭ ಕಳಸ ಮೆರವಣಿಗೆ ಜರುಗಲಿದೆ. ಮಾಜಿ ಸಚಿವ ಶಿವನಗೌಡ ನಾಯಕ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಶಾಸಕಿ ಕರೆಮ್ಮ ಜಿ.ನಾಯಕ, ಮಾಜಿ ಸಂಸದ ಬಿ.ವಿ.ನಾಯಕ ಭಾಗವಹಿಸುವರು. ಗೆಜ್ಜೆಬಾವಿ ಮಠದ ಚನ್ನಬಸವೇಶ್ವರ ಶಿವಾಚಾರ್ಯರು, ಸುಲ್ತಾನಪುರ ಪಂಚಾಕ್ಷರಿ ಮಠದ ಶಂಭುಸೋಮನಾಥ ಶಿವಾಚಾರ್ಯರು, ಗುಳಬಾಳ್ ಶ್ರೀರಾಮಲಿಂಗೇಶ್ವರ ಮಠದ ಮರಿಹುಚ್ಚೇಶ್ವರ ಸ್ವಾಮೀಜಿ, ಗಡ್ಡಿಮಠದ ಡಾ.ಬಸವರಾಜ ಸ್ವಾಮಿ ಸಾನ್ನಿಧ್ಯವಹಿಸುವರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.