ತಿ.ನರಸೀಪುರ: ಪಟ್ಟಣದ ಹಳೇ ಸಂತೆಮಾಳದ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಯುಗಾದಿ ಬ್ರಹ್ಮ ರಥೋತ್ಸವ ಪ್ರಯುಕ್ತ ಏ.7ರಿಂದ ಉತ್ಸವಗಳು ಆರಂಭವಾಗಲಿವೆ ಎಂದು ದೇವಾಲಯದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ ಹೇಳಿದ್ದಾರೆ.
ಏ.7ರ ಸಂಜೆ 6ಗಂಟೆಗೆ ಆಗಮಿಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ದೇಗುಲದಲ್ಲಿ 4ನೇ ವರ್ಷದ ಗಿರಿಜಾ ಕಲ್ಯಾಣ, ಏ.8ರ ಸಂಜೆ 6ಗಂಟೆಗೆ ಶ್ರೀ ಗಣಪತಿ ಪೂಜೆ, ಶ್ರೀ ನವಗ್ರಹ ಪೂಜೆ, ವಾಸ್ತು ಪೂಜೆ, ಪ್ರಾಯಶ್ಚಿತ ಹೋಮ ನೆರವೇರಲಿದೆ.
ಏ.9ರ ಯುಗಾದಿ ಹಬ್ಬದಂದು ಬೆಳಗ್ಗೆ 9ಗಂಟೆಗೆ ರಾಮಮಂದಿರದಲ್ಲಿ ಮಂಟಪೋತ್ಸವ, 10ಗಂಟೆಗೆ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜರುಗಲಿದೆ. ರಾತ್ರಿ 7ಗಂಟೆಗೆ ದೇವಾಲಯದಲ್ಲಿ ಶಯನೋತ್ಸವ ಜರುಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.