ತಿ.ನರಸೀಪುರ ತಾಲೂಕು ಟೈಲರ್‌ಗಳ ಸಂಘದಿಂದ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. 
ಜಿಲ್ಲೆ

ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಉತ್ಸವಮೂರ್ತಿ ಮೆರವಣಿಗೆ

ಮಾದೇಶ್ ತಿ.ನರಸೀಪುರ

ತಿ.ನರಸೀಪುರ: ತಾಲೂಕು ಟೈಲರ್‌ಗಳ ಸಂಘದಿಂದ ಸೋಮವಾರ ಶ್ರೀ ಶಿವಕಾಮ ಸುಂದರಿ ಅಮ್ಮನವರ ಸಮೇತ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು.

ಹಳೇ ಸಂತೆಮಾಳದಲ್ಲಿರುವ ದೇವಾಲಯದಲ್ಲಿ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿದ ಬಳಿಕ ಉತ್ಸವಮೂರ್ತಿಗಳಿಗೆ ಹೂಗಳಿಂದ ಶೃಂಗರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಅನ್ನದಾಸೋಹ ನಡೆಸಲಾಯಿತು.

ತಾಲೂಕು ಟೈಲರ್‌ಗಳ ಸಂಘದ ಅಧ್ಯಕ್ಷ ಕನಕ ಮಹೇಶ್, ಉಪಾಧ್ಯಕ್ಷರಾದ ಕಾರ್ತಿಕ್ ಮಹದೇವಸ್ವಾಮಿ, ಎಂ.ಎಲ್.ಮಹದೇವ, ಪ್ರಧಾನ ಕಾರ್ಯದರ್ಶಿ ಹರೀಶ್, ಕಾರ್ಯದರ್ಶಿ ಅಭಿ, ಖಜಾಂಚಿ ನಾಗರಾಜು, ಮುಖಂಡರಾದ ಮಹದೇವ್ ರಾಜು, ಸಿಐಡಿ ರಾಜು, ವೆಂಕಟೇಶ್, ಬಸವರಾಜ್, ನಾಗರಾಜು, ಸುರೇಶ್, ಚಿನ್ನಸ್ವಾಮಿ, ಕರಾಟೆ ಮಹದೇವ, ಶಿವಶಂಕರ್, ಸೋಮಣ್ಣ, ಸ್ವಾಮಿ, ದೇಗುಲದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ ಇತರರು ಇದ್ದರು.