ಶ್ರೀ ವೆಂಕಟೇಶ್ವರನನ್ನು ವಿಶೇಷವಾಗಿ ಅಲಂಕರಿಸಿರುವುದು. 
ಜಿಲ್ಲೆ

ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಸಂಪನ್ನ


ನಾಪೋಕ್ಲು: ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವರ್ಷದ ಕೊನೆಯ ಶ್ರಾವಣ ಶನಿವಾರ ಭಕ್ತರ ಸಂಗಮದೊಂದಿಗೆ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.

ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಶನಿವಾರ ಬೆಳಗ್ಗೆ ಏಳು ಗಂಟೆಗೆ ಅಭಿಷೇಕ ನೆರವೇರಿತು. 11ರಿಂದ 12 ಗಂಟೆವರೆಗೆ ಭಕ್ತರು ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ಮಧ್ಯಾಹ್ನ 12:30 ಕ್ಕೆ ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಕ್ತರಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ಮಾಡಲಾಯಿತು. ದೇವಾಲಯದ ಮುಖ್ಯ ಆರ್ಚಕ ಸುಧೀರ್ ಪೂಜಾ ಕೈಂಕರ್ಯ ನೆರವೇರಿಸಿದರು.

ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಟಿ.ಕೆ.ಸೂರ್ಯ ಕುಮಾರ್, ಕಾರ್ಯದರ್ಶಿ ಸುಜಿ ಕುಮಾರ್ , ಖಜಾಂಚಿ ಎಂ.ಪಿ. ಗೋಪಾಲ, ಗೌರವಾಧ್ಯಕ್ಷ ಟಿ.ಎನ್.ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬಾ, ಹಿರಿಯರಾದ ಟಿ.ವಿ.ಶ್ರೀನಿವಾಸ್, ಆನಂದ ಸ್ವಾಮಿ, ನಿರ್ದೇಶಕರಾದ ರಾಧಾಕೃಷ್ಣ ರೈ, ಸೀನ, ಶ್ಯಾಮ್ ಮಂದಪ್ಪ, ತಂಗಾ ಇತರರು ಹಾಜರಿದ್ದರು.