ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ 2 ವರ್ಷಗಳಿಂದ ವಕೀಲಿ ಶುಲ್ಕ ಬಾಕಿ ನೀಡದ ಸರ್ಕಾರದ ವಿಳಂಬ ನೀತಿಗೆ ಬೇಸತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್‌ವೊಬ್ಬರು (ಎಸ್‌ಪಿಪಿ) ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ರಾತ್ರೋರಾತ್ರಿ ಗುಂಪೊAದು ದಾಳಿ ಮಾಡಿ ಕಲ್ಲು ತೂರಾಟ ನಡೆಸಿತ್ತು. ಪ್ರಕರಣದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಿಜಯಕುಮಾರ ಶೀಲವಂತರ ರಿಟ್ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಫೆ. 27ರಂದು ಅರ್ಜಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ.
ವಾಟ್ಸಾಪ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಸಂದೇಶ ಬಂದಿದೆ ಎಂದು 2022ರ ಏಪ್ರಿಲ್‌ನಲ್ಲಿ ನೂರಾರು ಜನ ಹಳೇ ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡಿದ್ದರು. ಪೊಲೀಸರು ಗಾಯಗೊಂಡಿದ್ದಲ್ಲದೆ, ವಾಹನಗಳು ಜಖಂಗೊ0ಡಿದ್ದವು. ಬಂಽತರಾಗಿದ್ದ 40ಕ್ಕೂ ಹೆಚ್ಚು ಜನರ ಮೇಲಿನ ಮೊಕದ್ದಮೆ ನಡೆಸಲು ಹಿಂದಿನ ಬಿಜೆಪಿ ಸರ್ಕಾರ ಹೈಕೋರ್ಟ್ನ ಹಿರಿಯ ವಕೀಲ ವಿಜಯಕುಮಾರ ಶೀಲವಂತರ ಅವರನ್ನು ಎಸ್‌ಪಿಪಿ ಆಗಿ ನೇಮಕ ಮಾಡಿತ್ತು. ಅವರು ಒಂದು ವರ್ಷ ಕಾಲ ಸರ್ಕಾರದ ಪರ ಹುಬ್ಬಳ್ಳಿಯ ಅಽಕ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ ವಿಶೇಷ ನ್ಯಾಯಾಲಯ ಹಾಗೂ ಧಾರವಾಡ ಹೈಕೋರ್ಟ್ ಪೀಠದಲ್ಲಿ ವಾದ ಮಂಡಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದ ನಂತರ ವಿಜಯಕುಮಾರ ಅವರು 2023ರ ಜೂನ್‌ನಲ್ಲಿ ಎಸ್‌ಪಿಪಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗಸ್ಟ್ನಲ್ಲಿ ಕಾಂಗ್ರೆಸ್ ಸರ್ಕಾರ ಗಲಭೆ ಪ್ರಕರಣವನ್ನು ವಾಪಸ್ ಪಡೆದಿತ್ತು. ಆದರೆ, ವಿಜಯಕುಮಾರ ಅವರಿಗೆ ಪಾವತಿಯಾಗಬೇಕಿದ್ದ ವಕೀಲಿ ಶುಲ್ಕವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ.
`ಧಾರವಾಡ ಹೈಕೋರ್ಟ್ ಮತ್ತು ಬೆಂಗಳೂರು ಪ್ರಧಾನ ಪೀಠದಲ್ಲಿ ವಾದ ಮಂಡಿಸಿದ 27.28 ಲಕ್ಷ ರೂ. ಬಿಲ್ ಪಾವತಿಸಲಾಗಿದೆ. ಹುಬ್ಬಳ್ಳಿ ಮತ್ತು ಬೆಂಗಳೂರಿನ ಎನ್‌ಐಎ ನ್ಯಾಯಾಲಯದಲ್ಲಿ ವಾದ ಮಂಡಿಸಿದ 44.59 ಲಕ್ಷ ರೂ. ಶುಲ್ಕ ಬಾಕಿ ಇದೆ. ಈ ಕುರಿತು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಫೆ. 27ರಂದು ಹೈಕೋರ್ಟ್ನಲ್ಲಿ ನಡೆಯುವ ನಿರೀಕ್ಷೆ ಇದೆ' ಎಂದು ಹಿರಿಯ ವಕೀಲ ವಿಜಯಕುಮಾರ `ವಿಜಯವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.