ಹುಕ್ಕೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಾಣಾಕ್ಷ ನಡೆಗಳಿಂದ ಜಗತ್ತಿನ ಇತರ ದೇಶಗಳು ಭಾರತದತ್ತ ಗಮನಿಸುತ್ತಿವೆ. ಸತತ ಒಂಬತ್ತು ವರ್ಷಗಳಿಂದ ಕಳಂಕರಹಿತ ಆಡಳಿತ ನೀಡಿದ್ದಾರೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್‌ನ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಹುಕ್ಕೇರಿ ಮಂಡಲದ ಕಾರ್ಯಕಾರಿಣಿಯಿಂದ ಕೇಂದ್ರ ಸರ್ಕಾರದ ಒಂಬತ್ತು ವರ್ಷಗಳ ಸಾಧನೆಯ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ಮಹಾಮಾರಿಯಿಂದ ಜಗತ್ತಿನ ಬಹಳಷ್ಟು ರಾಷ್ಟ್ರಗಳು ಆರ್ಥಿಕ ಸಂಕಷ್ಟ ಅನುಭವಿಸಿದರೂ, ಭಾರತ ಮಾತ್ರ ಯಾವ ಸಮಸ್ಯೆಯೂ ಎದುರಿಸಲಿಲ್ಲ. ಅನೇಕ ರಾಷ್ಟ್ರಗಳಿಗೂ ಆರ್ಥಿಕ ನೆರವು ನೀಡಿದ ಗರಿಮೆ ನಮ್ಮದು. ಇದು ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಫಲ ಎಂದರು.
ಹುಕ್ಕೇರಿ ಮಂಡಲಾಧ್ಯಕ್ಷ ರಾಚಯ್ಯ ಹಿರೇಮಠ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳ ಮೂಲಕ ಜನರನ್ನು ಮರಳು ಮಾಡಿದ್ದರಿಂದ ಬಿಜೆಪಿಗೆ ಹಿನ್ನಡೆ ಆಗಿದೆ. ಹುಕ್ಕೇರಿಯಲ್ಲಿ ಕತ್ತಿ ಸಹೋದರರ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ದೊರೆತಿದೆ ಎಂದರು. ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಮಾತನಾಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಮೊದಲು ನಾಲ್ವರು ಶಾಸಕರಿದ್ದರು. ಈ ಬಾರಿ ಮೂವರು ಆಯ್ಕೆಯಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಸ್ಥಾನ ಉಳಿಸಿಕೊಳ್ಳಲಿದ್ದೇವೆ ಎಂದರು.
ಕೇಂದ್ರ ಸರ್ಕಾರದ ಒಂಬತ್ತು ವರ್ಷಗಳ ಅಭಿವೃದ್ಧಿ ಕಾರ್ಯ ಮತ್ತು ಸಾಧನೆಯ ಕರಪತ್ರ ಹಾಗೂ ಕೈಪಿಡಿ ಬಿಡುಗಡೆಗೊಳಿಸಲಾಯಿತು. ರೈತ ಮೋರ್ಚಾ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ತಾಲೂಕಾಧ್ಯಕ್ಷ ರವೀಂದ್ರ ಹಿಡಕಲ್, ಕಲಗೌಡ ಪಾಟೀಲ, ಅರುಣ ಹುದ್ದಾರ, ರಾಜು ಮುನ್ನೋಳಿ, ಶಿವು ಮುಗಳಿ, ಮಹಾಂತೇಶ ಮಗೆನ್ನವರ, ಗೈಬುಸಾಬ್ ಅಮ್ಮಣಗಿ, ಬಾಳಾಸಾಹೇಬ ಮೊಕಾಶಿ, ರಾಹುಲ ಪಾಟೀಲ, ಪ್ರಭಾಕರ ಹಂಚಿನಾಳ,
ತುಕಾರಾಮ ಬಸ್ತವಾಡೆ, ಮಹಾಂತೇಶ ಶಿರಹಟ್ಟಿ,
ಸವಿತಾ ಏಣಗಿಮಠ, ಶರ್ಮಿಳಾ ಬಡಮಲ್ಲನವರ, ಶಾಂತಾ ಸೊಲ್ಲಾಪೂರೆ, ತ್ರಿವೇಣಿ ಕಾಂಬಳೆ ಇತರರಿದ್ದರು.