ಆನೇಕಲ್​ ತಾಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಜೆಎಸ್​ಸಿ ಲೆಜೆಂಡ್ಸ್​ ತಂಡದಿಂದ ಹಮ್ಮಿಕೊಂಡಿದ್ದ ಅರ್ಜುನ ಕಪ್​ ಕ್ರಿಕೆಟ್​ ಪಂದ್ಯ ವಿಜೇತರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ಚಿನ್ನಪ್ಪ ಚಿಕ್ಕಹಾಗಡೆ ಬಹುಮಾನ ವಿತರಿಸಿದರು. ಜೆಎಸ್​ಸಿ ಲೆಜೆಂಡ್ಸ್​ ತಂಡದ ಚೇತನ್​ ಚಿರಾಗ್​, ಪುನಿತ್​, ಶ್ರೀನಾಥ್​, ಮುತ್ತಾನಲ್ಲೂರು ಗ್ರಾಪಂ ಅಧ್ಯಕ್ಷ ನಾಗರತ್ನಾ ಕಾಂತರಾಜು ಇದ್ದರು. 
ಜಿಲ್ಲೆ

ಕ್ರೀಡಾ ಮನೋಭಾವ ಮುಖ್ಯ

ಆನೇಕಲ್​ : ಕ್ರೀಡೆಯಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ಚಿನ್ನಪ್ಪ ಚಿಕ್ಕಹಾಗಡೆ ತಿಳಿಸಿದರು. ಮುತ್ತಾನಲ್ಲೂರು ಗ್ರಾಮದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯ ಸ್ಮರಣಾರ್ಥ ಹಾಗೂ ದಸರಾ ಪ್ರಯುಕ್ತ ಜೆಎಸ್​ಸಿ ಲೆಜೆಂಡ್ಸ್​ ತಂಡದಿಂದ ಹಮ್ಮಿಕೊಂಡಿದ್ದ ಅರ್ಜುನ ಕಪ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಗೆದ್ದವನು ನಾಯಕನಾಗುತ್ತಾನೆ. ಸೋತವನು ಮಾರ್ಗದರ್ಶಕನಾಗುತ್ತಾನೆ. ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದೆಯೋ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ಯುವಕರು ದುಶ್ಚಟಗಳ ದಾಸರಾಗುತ್ತಿದ್ದು, ಇದರಿಂದ ದೇಶದ ಪ್ರಗತಿಗೆ ಮಾರಕವಾಗಿದೆ. ಯುವಕರಲ್ಲಿ ಕ್ರೀಡಾಭಿಮಾನ ಬೆಳೆಸಿದರೆ ದುಶ್ಚಟಗಳಿಗೆ ಬಲಿಯಾಗದೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ. ಸರ್ಕಾರ ಮತ್ತು ಸ್ಥಳಿಯ ಗ್ರಾಪಂಗಳು ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವಂತಹ ಕಾರ್ಯಕ್ರಮ ರೂಪಿಸಬೇಕು ಎಂದರು. ಮಾಜಿ ಅಧ್ಯಕ್ಷ ಕೆ.ವಿಶ್ವನಾಥ ರೆಡ್ಡಿ, ಆರ್​.ಕೃಷ್ಣಾರೆಡ್ಡಿ, ಬಿಜೆಪಿ ಮುಖಂಡರಾದ ಜಯಪ್ರಕಾಶ್​ ರೆಡ್ಡಿ, ಜನ ಸಂದ ಮಂಜುನಾಥ್​, ರೈತ ಮುಖಂಡ ಹರೀಶಣ್ಣಯ್ಯ, ನವೀನ್​, ಮಧು ಇತರರು ಇದ್ದರು.