ಜಿಲ್ಲೆ

ರಕ್ತದಾನ ಮಾಡಿದ ಕ್ರೀಡಾಪಟು

ಮರಿದೇವ ಹೂಗಾರ

ಹುಬ್ಬಳ್ಳಿ: ಆರ್‌ಜಿಯುಎಚ್‌ಎಸ್ ವತಿಯಿಂದ ನಗರದ ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ಆಗಮಿಸಿದ್ದ ಕ್ರೀಡಾಪಟು ಒಬ್ಬರು ಗುರುವಾರ ಕೆಎಂಸಿಆರ್‌ಐ ರಕ್ತ ಭಂಡಾರಕ್ಕೆ ತೆರಳಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.

ಮಂಗಳೂರಿನ ಫಾದರ್ ಮುಲ್ಲಾರ್ ಹೋಮಿಯೋಪಥಿ ಮೆಡಿಕಲ್ ಕಾಲೇಜ್‌ನ ವಿದ್ಯಾರ್ಥಿ ಹಾಗೂ ಸ್ಪ್ರಿಂಟ್ ಅಥ್ಲೆಟಿಕ್ ಫಲ್ಹಾ ಸೈಯದ್ ರಕ್ತದಾನ ಮಾಡಿದವರು. ಈಗಾಗಲೇ ಬೇರೆ ಬೇರೆ ಕಡೆ ರಕ್ತದಾನ ಮಾಡಿರುವ ಇವರು ರಕ್ತದಾನದ ವಾಹನ ನೋಡಿ ಭಂಡಾರಕ್ಕೆ ತೆರಳಿ ದಾನ ಮಾಡಿದ್ದಾರೆ. ಈ ವೇಳೆ ಡಾ. ಕೆ.ಎಫ್. ಕಮ್ಮಾರ ಹಾಗೂ ಡಾ. ಸುನೀಲ ಗೋಖಲೆ ಅವರು ಸೈಯದ್‌ಗೆ ಪ್ರಮಾಣ ಪತ್ರ ನೀಡಿದರು. ರಕ್ತ ಭಂಡಾರದ ಮುಖ್ಯಸ್ಥೆ ಡಾ. ಕವಿತಾ ಏವೂರ ಇದ್ದರು.