ಚನ್ನರಾಯಪಟ್ಟಣ ತಾಲೂಕಿನ ಆಲ್ಫೋನ್ಸ್ ನಗರದ ಸೇಂಟ್ ಮೇರಿಸ್ ಪ್ರೌಢಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾ ಸಾಧಕ ವಿದ್ಯಾರ್ಥಿಗಳು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಂ.ಎನ್. ಪ್ರಶಾಂತ್, ಸಿ.ಎನ್. ವೆಂಕಟೇಶ್, ಎಸ್.ಕೆ.ರಘು, ಸಿ.ಪ್ರಕಾಶ್ ಕುಮಾರ್, ಎ.ಶಿವಾನಂದ್, ಶ್ರೀನಿವಾಸ್, ಜಯಪ್ರಕಾಶ್, ಸುಧಾಕರ್, ಡೇನಿಯಲ್ ರೊನಾಲ್ಡ್, ಪುಷ್ಪಾ ಇತರರು ಇದ್ದರು. 
ಜಿಲ್ಲೆ

ಕ್ರೀಡೆ, ಎಸ್ಸೆಸ್ಸೆಲ್ಸಿ ಸಾಧಕರಿಗೆ ಅಭಿನಂದನೆ

ವಸಂತಕುಮಾರ್ ಬಿ

ಚನ್ನರಾಯಪಟ್ಟಣ: ತಾಲೂಕಿನ ಆಲ್ಫೋನ್ಸ್ ನಗರದ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲೆಯ ಕ್ರೀಡಾ ಸಾಧಕ ವಿದ್ಯಾರ್ಥಿಗಳು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕೋಲಾರದಲ್ಲಿ ಕಳೆದ ತಿಂಗಳು ಆಯೋಜಿಸಿದ್ದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾಲೆ ವಿದ್ಯಾರ್ಥಿಗಳಾದ ಶಿಶಿರ್, ಮಂಜುನಾಥ್, ಸುಮಂತ್, ಕೃತಿಕ್ ಹಾಗೂ ಸುಪ್ರೀತ್. (4*100 ಮೀ. ರಿಲೇ), ಶಿಶಿರ್ ಮಂಜುನಾಥ್ 800 ಮೀ. ಓಟ, ಪ್ರಾಥಮಿಕ ಶಾಲೆಯಿಂದ ಹೇಮಲತಾ (ಎತ್ತರ ಜಿಗಿತ ) ಹಾಗೂ 2023-24 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಎಂ.ಯು. ಐಶ್ವರ್ಯಾ ಹಾಗೂ ವಿ.ಎಂ.ಲಕ್ಷ್ಮೀ ಅವರನ್ನು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಮಾತನಾಡಿ, ಇಷ್ಟಪಟ್ಟು, ಶ್ರಮ ಪಟ್ಟರೆ ಸಾಧಿಸಲು ಯಾವುದೂ ಕಷ್ಟವಲ್ಲ. ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ ತಾಲೂಕಿಗೆ ಹೆಮ್ಮೆ ತಂದಿದೆ. ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಪೌಷ್ಟಿಕ ಆಹಾರ ಮತ್ತು ಸೂಕ್ತ ತರಬೇತಿಯೂ ಅಗತ್ಯವಿದೆ. ಕೇವಲ ಶಿಕ್ಷಣವೇ ಅಂತಿಮವಾಗದೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡೋಣ. ಮೆಟ್ರಿಕ್ ಪರೀಕ್ಷೆಯಲ್ಲೂ ಶೇ.100 ಫಲಿತಾಂಶ ಸಾಧನೆ ಮಾಡಲಿ ಹಾರೈಸಿದರು.

ಇದೇ ಸಂದರ್ಭದಲ್ಲಿ ತರಬೇತಿ ಐಪಿಎಸ್ ಅಧಿಕಾರಿ ಎಂ.ಎನ್. ಪ್ರಶಾಂತ್, ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್. ವೆಂಕಟೇಶ್, ನೊರನಕ್ಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಕೆ.ರಘು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಿ.ಪ್ರಕಾಶ್ ಕುಮಾರ್, ಶಿಕ್ಷಣ ಸಂಯೋಜಕರಾದ ಎ.ಶಿವಾನಂದ್, ಇಸಿಒಗಳಾದ ಶ್ರೀನಿವಾಸ್, ಜಯಪ್ರಕಾಶ್, ಸಿಆರ್‌ಪಿ ಸುಧಾಕರ್, ದೈಹಿಕ ಶಿಕ್ಷಣ ಶಿಕ್ಷಕರಾದ ಡೇನಿಯಲ್ ರೊನಾಲ್ಡ್, ಪುಷ್ಪಾ ಇತರರು ಇದ್ದರು.