ಕೆರೂರ ಪಟ್ಟಣದ ಎ.ಆರ್. ಹಿರೇಮಠ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ ಚಾಲನೆ ನೀಡಿದರು. ಡಾ.ಎಂ.ಜಿ. ಕಿತ್ತಲಿ, ಮಾಂತೇಶ ಮೆಣಸಗಿ, ಮೋದಿನಸಾಬ ಚಿಕ್ಕೂರ, ವಿಠ್ಠಲಗೌಡ ಗೌಡರ, ಕುಮಾರ ಐಹೊಳ್ಳಿ ಮತ್ತಿತರರಿದ್ದಾರೆ. 
ಜಿಲ್ಲೆ

ಕ್ರೀಡೆಗಳು ಯುವಕರಿಗೆ ಸ್ಫೂರ್ತಿ ನೀಡಲಿ

ಕೆರೂರ: ಕ್ರೀಡೆಗಳು ಯುವಕರಿಗೆ ಸ್ಫೂರ್ತಿದಾಯಕ ಆಗಿರಬೇಕು ಎಂದು ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ ಹೇಳಿದರು.

ಪಟ್ಟಣದ ಎ.ಆರ್. ಹಿರೇಮಠ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಗೆಳೆಯರ ಬಳಗದವರು ಮಂಗಳವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬರೂ ಭಾಗವಹಿಸಿ ಆನಂದಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ ಮಾತನಾಡಿ, ಯುವಕರು ದುಶ್ಚಗಳಿಂದ ದೂರವಿದ್ದು, ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾಂತೇಶ ಮೆಣಸಗಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೊದಿನಸಾಬ ಚಿಕ್ಕೂರ, ಸದಸ್ಯ ವಿಠ್ಠಲಗೌಡ ಗೌಡರ, ಕುಮಾರ ಐಹೊಳ್ಳಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಶ್ರೀಧರ ಕಾಂಬಳೆ, ಮುಖಂಡ ಸದಾನಂದ ಮದಿ, ಶಿವುಕುಮಾರ ಜಾಲಿಹಾಳ, ರಾಯಲ್ ಚಾಲೆಂಜರ್ಸ್ ಕಮಿಟಿ ಅಧ್ಯಕ್ಷ ಸತೀಶ ಕ್ಷತ್ರಿ, ಜಗದೀಶ ಪ್ರಭಾಕರ, ಸಂಜು ಪ್ರಭಾಕರ, ದೇವರಾಜ ಚೂರಿ, ವಿಠ್ಠಲ ಮಾದರ, ಶಪೀಕ್ ಹದ್ಲಿ, ಭೀಮಶಿ ವಡ್ಡರ ಮತ್ತಿತರರಿದ್ದರು.