- ಸರಗೂರು : ತಾಲೂಕಿನ ಕಂದಲಿಕೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹಾದನೂರು ಶಾಲೆಯ ಬಾಲಕಿಯರು ಕಬಡ್ಡಿ ಪ್ರಥಮ, ಬಾಲಕರು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.200.ಮೀ. ಓಟದಲ್ಲಿ ಪ್ರಣೂಪ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ತನುಶ್ರೀ ದ್ವಿತೀಯ, 600.ಮೀ. ಓಟದಲ್ಲಿ ಐಶ್ವರ್ಯಾ ತೃತೀಯ, ಪಥ ಸಂಚಲನದಲ್ಲಿ ಶಾಲೆ ಮಕ್ಕಳು ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಮಂಗಳವಾರ ಶಾಲೆಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾತನಾಡಿದ ಮುಖ್ಯ ಶಿಕ್ಷಕಿ ಶಾಂತಮ್ಮ, ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿ
ಸಾಧನೆ ತೋರಿರುವುದು ಅಭಿನಂದನೀಯ ಎಂದರು. ಕ್ರೀಡೆಯಲ್ಲಿ ತೊಡಗುವ ಮಕ್ಕಳಿಗೆ ಆರೋಗ್ಯ ವೃದ್ಧಿಯಾಗುತ್ತದೆ. ಓದಿನ ಜತೆಗೆ ಕ್ರೀಡೆಗಳೂ ಅಗತ್ಯ ಎಂದರು. ಸಹ ಶಿಕ್ಷಕರಾದ ಸಿದ್ದರಾಜು, ಕೃಷ್ಣಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ, ಸದಸ್ಯರಾದ ಪಾಪಣ್ಣ, ಹಿರಿಯ ವಿದ್ಯಾರ್ಥಿಗಳಾದ ಅವಿನಾಶ, ಸಾಮ್ರಾಟ್ ಇತರರು ಇದ್ದರು.