ಮುದ್ದೇಬಿಹಾಳ: ಕ್ರೀಡೆಗಳು ದೇಹ ಹಾಗೂ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಯುವ ಬಳಗದ ಕ್ರಿಕೆಟ್ ಟೀಮ್‌ನಿಂದ ಹುಡ್ಕೋ ಬಡಾವಣೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಮಿನಿ ಬೌಂಡರಿ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಕ್ರೀಡಾ ಮನೋಭಾವ ಹೊಂದಬೇಕು. ವಿದ್ಯಾರ್ಥಿಗಳು, ಯುವಕರು ಕೇವಲ ಕಂಪ್ಯೂಟರ್ ಗೇಮ್‌ಗಳಿಂದ ದೂರವಿದ್ದು ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದರು.
ತಾಲೂಕಿನಿಂದ ಸಾಕಷ್ಟು ಯುವ ಕ್ರೀಡಾಪಟುಗಳು ಕ್ರಿಕೆಟ್ ಸೇರಿ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪಯತ್ನ ಹಾಗೂ ಪರಿಶ್ರಮ ಎರಡೂ ಪ್ರತಿಯೊಬ್ಬರ ಮೆಟ್ಟಿಲಾದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಮೈಹಿಬೂಬ್ ಗೊಳಸಂಗಿ ಪಂದ್ಯಾವಳಿ ಉದ್ಘಾಟಿಸಿದರು. ಕಾಂಗ್ರೆಸ್ ನಾಯಕಿ ಸಂಗೀತಾ ನಾಡಗೌಡ, ಡಾ. ತಾರಗಾರ, ಸುಚಿತ ಚಳಗೇರಿ, ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಫೀಕ್ ಶಿರೋಳ, ಆಶ್ರಯ ಸಮಿತಿ ನಾಮನಿರ್ದೇಶಿತ ಸದಸ್ಯ ವಿರುಪಾಕ್ಷಿ ಪತ್ತಾರ, ಯಾಸಿನ್ ಅತ್ತಾರ, ದಾವಲ್ ಗೊಳಸಂಗಿ, ಗಂಗಾರಾಮ್ ಬಾಗಲಕೋಟ, ಸೀತಾರಾಮ ರಾಥೋಡ್, ರಾಘು ಕುಂದರಗಿ, ರಮಜಾನ್ ನದಾಫ್, ಯಲ್ಲಪ್ಪ ಮ್ಯಾಗೇರಿ, ತೌಫಿಕ್ ಮೊಕಾಶಿ, ಜಾಕಿರ್ ಢವಳಗಿ, ಮಕಾನದಾರ, ಅಡವ್ಯಾ ಹಿರೇಮಠ, ಸುಹೇಬ್ ಪಟೇಲ ಇತರರಿದ್ದರು.