ಹುಬ್ಬಳ್ಳಿ: ಮಾಸ್ಟರ್ಸ್ ಗೇಮ್ಸ್ ಅಸೋಶಿಯೇಶನ್ ವತಿಯಿಂದ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ನಲ್ಲಿ ನಗರದ ಯೋಗ ಹಾಗೂ ಸ್ಕೇಟಿಂಗ್ ತರಬೇತಿದಾರ ಈರಪ್ಪ ಕಾಡಪ್ಪನವರ ವಿವಿಧ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು 65 ವರ್ಷ ಮೇಲ್ಪಟ ವಿಭಾಗದಲ್ಲಿ ನಾಲ್ಕು ಆಟದಲ್ಲಿ ಬಹುಮಾನ ಗೆದ್ದಿದ್ದಾರೆ. ಉದ್ದ ಜಿಗಿತ ಸ್ವರ್ಣ, ತ್ರಿವಿದ ಜಿಗಿತ ರಜತ, ಎತ್ತರ ಜಿಗಿತ ಕಂಚು, ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಈರಪ್ಪ ಕಾಡಪ್ಪನವರ ಇವರು ರಾಷ್ಟ್ರೀಯ ಮಟ್ಟದಲ್ಲಿ ಆಡಿ ಈಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
2024ರ ಜುಲೈನಲ್ಲಿ ್ಯಾನ್ ಅಮೆರಿಕನ್ ಮಾಸ್ಟರ್ಸ್ ಗೇಮ್ಸ್ ವತಿಯಿಂದ ಏರ್ಪಡಿಸಿರುವ ಸ್ಪರ್ಧೆಗೆ ಇವರು ಆಯ್ಕೆಯಾಗಿದ್ದಾರೆ.