ಜಿಲ್ಲೆ

ಆಟೋಟಗಳು ದೈಹಿಕವಾಗಿ ಸದೃಢಗೊಳಿಸತ್ತವೆ: ಹರಿಪ್ರಕಾಶ ಕೋಣೆಮನೆ

Uttara Kannada - Subash Hegde
ಯಲ್ಲಾಪುರ:   ಕೊಠಡಿಯಲ್ಲಿ ನಡೆಯುವ ಪಾಠ ಪ್ರವಚನಗಳು ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಿದರೆ, ಮೈದಾನದಲ್ಲಿ ನಡೆಸುವ ಆಟೋಟಗಳು ದೈಹಿಕವಾಗಿ ಸದೃಢಗೊಳಿಸತ್ತವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
   ಅವರು ಪಟ್ಟಣದ ವಿಶ್ವದರ್ಶನ ಶಾಲಾ ಮೈದಾನದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಾರ್ಯಾಲಯ ಮತ್ತು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಹೋಯೋಗದಲ್ಲಿ ಯಲ್ಲಾಪುರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.
   ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಸಮಷ್ಟಿಯ ಹಿತ ದೃಷ್ಟಿಯಿಂದ, ಕ್ರೀಡಾ ಮನೋಭಾವದಿಂದ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು‌.
    ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ ಶ್ರಮ, ಶ್ರದ್ಧೆಯಿಂದ ಭಾಗವಹಿಸಿ. ವಿದ್ಯಾರ್ಥಿಗಳು ಕ್ರಿಡಾಕೂಟದಲ್ಲಿ  ಭಾಗವಹಿಸಬೇಕೆಂದರು.
   ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ  ಚಂದ್ರಶೇಖರ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ನಾಯ್ಕ, ವಿವಿಧ ಪ್ರೌಢಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.
    ವಿದ್ಯಾರ್ಥಿಗಳಾದ ಸಂಕೇತ ಮತ್ತು ವಿಸ್ಮಿತ ಹೆಗಡೆ ಕ್ರೀಡಾಜ್ಯೋತಿ ತಂದರು. ದೈಹಿಕ ಶಿಕ್ಷಕ‌ ಮಹೇಶ ನಾಯ್ಕ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಮೇಧಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಸ್ವಾಗತಿಸಿದರು. ಶಿಕ್ಷಕರಾದ ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ಖೈರುನ್ ಶೇಖ್ ವಂದಿಸಿದರು.