ಜಿಲ್ಲೆ

ಆರೋಗ್ಯ ಸ್ಥಿರವಾಗಿರಲು ಕ್ರೀಡೆ ಸಹಕಾರಿ

ತುಮಕೂರು ಡೆಸ್ಕ್

ಪಟ್ಟನಾಯಕನಹಳ್ಳಿ: ಕ್ರೀಡೆ ಯುವಕರಲ್ಲಿ ನವ ಚೈತನ್ಯ ಮೂಡಿಸಲಿದ್ದು, ಆರೋಗ್ಯ ಸ್ಥಿರವಾಗಿರುವಂತೆ ಮಾಡುತ್ತದೆ ಎಂದು ಎಂದು ವಿಧಾನ ಪರಿಷತ್​ ಸದಸ್ಯ ಎಂ.ಚಿದಾನಂದ ಗೌಡ ಹೇಳಿದರು.

ಶಿರಾ ತಾಲೂಕು ಹೆಂದೊರೆ ಶ್ರೀರಾಮ ಕ್ರಿಕೆರ್ಟ್ಸ್​ ಆಯೋಜಿಸಿದ್ದ ಕ್ರಿಕೆಟ್​ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಯುವಕರು ಒಗ್ಗೂಡಲು ಸಹಕಾರಿಯಾಗುತ್ತವೆ. ಒಗ್ಗಟ್ಟಿನಿಂದ ಆಟವಾಡಿದರೆ ಗೆಲುವು ಸುಲಭವಾಗಿ ಲಭಿಸಲಿದೆ ಎಂದರು.

ನಿವೃತ್ತ ಶಿಕ್ಷಕ ಕುಮಾರ್​, ಯುವಕರಾದ ಮಧು, ಹರ್ಷ, ಪ್ರವಿಣ್​, ರಾಕೇಶ್​, ಮಂಜು, ಚೇತನ್​, ಸುರೇಶ, ಭರತ್​, ಅಕ್ಷಯ, ನವೀನ್​ ಮತ್ತಿತರರು ಇದ್ದರು.