ಇಲಕಲ್ಲದಲ್ಲಿ ಹಮ್ಮಿಕೊಂಡ ಹುನಗುಂದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ವಿ.ಸಿ.ಅಕ್ಕಿ ಸಂಘದ ಅಧ್ಯಕ್ಷ ವಿ .ಸಿ. ಅಕ್ಕಿ ಇತರರು ಇದ್ದರು. 
ಜಿಲ್ಲೆ

ವ್ಯಕ್ತಿತ್ವ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ಹುನಗುಂದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ನಗರದ ಎಸ್‌ವಿಎಂ ಸಂಘದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು.

ಶಾಸಕ, ಕರ್ನಾಟಕ ವೀರಶೈವ ಲಿಂಗಾಯತ ಅಭಿವದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕ್ರೀಡೆಗಳು ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಗುರುಮಹಾಂತ ಶ್ರೀಗಳು ಮಾತನಾಡಿ, ದೈಹಿಕ ಸಾಮರ್ಥ್ಯ ಪ್ರದರ್ಶಿಸಲು ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸಬೇಕು ಎಂದರು.

ಜೆ.ಕೆ. ಮಲಗೊಂಡ ಪಿಯು ಕಾಲೇಜ್ ಹಾಗೂ ಕ್ರೀಡಾಕೂಟದ ಸಮಿತಿ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ವಿಎಂ ಸಂಘದ ಅಧ್ಯಕ್ಷ ಶಿವರುದ್ರಪ್ಪ ಗೊಂಗಡಶೆಟ್ಟಿ, ಇಳಕಲ್ಲ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ವಿ.ಸಿ.ಅಕ್ಕಿ ಸಂಘದ ಅಧ್ಯಕ್ಷ ವಿ .ಸಿ. ಅಕ್ಕಿ, ಡಾ. ಅರುಣಾ ಕೆ. ಅಕ್ಕಿ, ಡಾ ಮಹಾಂತೇಶ ಅಕ್ಕಿ, ಡಾ ಅನಿತಾ ಅಕ್ಕಿ, ಅವಿನಾಶ್ ಅಕ್ಕಿ, ಅದಿತಿ ಅಕ್ಕಿ, ಗ್ರಾನೈಟ್ ಉದ್ಯಮಿ ರಾಜು ಬೋರಾ, ವೆಂಕಟೇಶ ಸಾಕಾ, ಶರಣಪ್ಪ ಆಮದಿಹಾಳ, ಶಾಂತಕುಮಾರ ಸುರಪುರ, ವಿಜಯಮಹಾಂತೇಶ ಗದ್ದನಕೇರಿ, ಶಿವಾನಂದ ಮುಚಖಂಡಿ, ಟಿಪ್ಪು ಭಂಡಾರಿ, ಅರುಣ ಬಿಜ್ಜಲ್, ವಿಠ್ಠಲ್ ಜಕ್ಕಾ, ಸುರೇಶ ಜಂಗ್ಲಿ, ಮಾಲೇಶ ಬಂಡಿವಡ್ಡರ, ಮಹಾಂತೇಶ ಹರ್ತಿ ಇದ್ದರು. ಪ್ರಾ.ಎಸ್.ಎನ್. ಗಡೇದ ಪ್ರಾಸ್ತಾವಿಕ ಮಾತನಾಡಿದರು.

ಜಿ.ಕೆ.ಮಲಗೊಂಡಾ ಪ.ಪೂ. ಕಾಲೇಜಿನ ಪ್ರಾಚಾರ್ಯ ಸಂತೋಷಕುಮಾರ ಗೌಡರ ಸ್ವಾಗತಿಸಿದರು. ಸುಶ್ಮಿತಾ ಬಾರಿಗಿಡಿದ ನಿರೂಪಿಸಿದರು.