ಜಿಲ್ಲೆ

ಕ್ರೀಡಾ ತವರಿನಲ್ಲೇ ಸುಸಜ್ಜಿತ ಕ್ರೀಡಾಂಗಣಗಳ ಕೊರತೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಭೌಗೋಳಿಕವಾಗಿ ವಿಶಿಷ್ಟ ಜಿಲ್ಲೆಯಾಗಿರುವ ಕೊಡಗಿನಿಂದ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಸೀಮಿತ ಸವಲತ್ತುಗಳ ನಡುವೆಯೇ ಇಲ್ಲಿನ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟಿçÃಯ ಮಟ್ಟದಲ್ಲೂ ಮಿಂಚುತ್ತಿವೆ. ಕೊಡಗಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಸುಸಜ್ಜಿತ ಕ್ರೀಡಾಂಗಣಗಳು ಇವೆ. ಉಳಿದೆಡೆಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಕಚ್ಚಾ ಆಟದ ಮೈದಾನಗಳೇ ಗತಿ. ಆದರೂ ಜಿಲ್ಲೆಯ ಕ್ರೀಡಾ ಪಟುಗಳು ತಮ್ಮ ತಮ್ಮ ಆಯ್ಕೆಯ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕೌಟುಂಬಿಕ ಪಂದ್ಯಾವಳಿಗಳ ಮೂಲಕವೂ ಸದ್ದು ಮಾಡುವ ಕೊಡಗಿನಲ್ಲಿ ಹಾಕಿ ಅಥವಾ ಕ್ರಿಕೆಟ್ ಆಡಲು ಸೂಕ್ತ ಮೈದಾನದ ಕೊರತೆ ಇದೆ. ಆತಿಥ್ಯ ವಹಿಸಿಕೊಳ್ಳುವ ಕುಟುಂಬಗಳೇ ತಮ್ಮ ಸರದಿ ಬಂದಾಗ ಲಕ್ಷಾಂತರ ರೂ. ವ್ಯಯಿಸಿ ಮೈದಾನಗಳನ್ನು ಸಿದ್ದಪಡಿಸಿಕೊಳ್ಳುವುದು, ಆಟಗಾರರ ಗ್ಯಾಲರಿ ನಿರ್ಮಿಸಿಕೊಳ್ಳುವುದು ಸೇರಿದಂತೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಈ ಎಲ್ಲದರ ಮಧ್ಯೆ ಇರುವ ಕ್ರೀಡಾಂಗಣಗಳನ್ನೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಲ್ಲಿ ಸಂಬAಧಿಸಿದವರ ಬೇಜವಾಬ್ದಾರಿತನ ಕಂಡುಬರುತ್ತಿದೆ.

ಆಟದ ಮೈದಾನಗಳು ಆಟಕ್ಕಿಂತಲೂ ಅನ್ಯ ಉದ್ದೇಶಕ್ಕೆ ಹೆಚ್ಚಾಗಿ ಬಳಕೆ ಆಗುತ್ತಿದೆ. ವಾಹನ ನಿಲುಗಡೆ, ಜಾತ್ರೆ-ಮೇಳಗಳ ಆಯೋಜನೆ, ವಾಹನ ಕಲಿಕೆ, ಸಭೆ, ಸಮಾರಂಭ, ಸಮ್ಮೇಳನಗಳ ಆಯೋಜನೆ... ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಕ್ರೀಡಾಂಗಣಗಳನ್ನು ಬಳಸುವುದರಿಂದ ಅವು ಆಟೋಟಗಳಿಗೆ ಸಿಗದಷ್ಟು ಹಾಳಾಗುತ್ತಿದೆ. ಇದರಿಂದಾಗಿ ಕ್ರೀಡಾಪಟುಗಳಿಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅತಿಯಾದ ಮಳೆಯಿಂದ ಮೈದಾನಗಳು ಗುಂಡಿ ಬಿದ್ದು, ವಿದ್ಯಾರ್ಥಿಗಳ ಆಟೋಟಕ್ಕೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಮೈದಾನದೊಳಗೆ ವಾಹನಗಳನ್ನು ನಿಲ್ಲಿಸುವುದರಿಂದ ಮೈದಾನಗಳು ಮತ್ತಷ್ಟು ಹಾಳಾಗುತ್ತದೆ. ಮೈದಾನಗಳ ಸುತ್ತ ಕಾಂಪೌAಡ್ ನಿರ್ಮಿಸಿಬೇಕು. ವಾಹನಗಳನ್ನು ಮೈದಾನದಲ್ಲಿ ನಿಲ್ಲಿಸುವುದಕ್ಕೆ ನಿಷೇಧ ಹೇರಬೇಕು.

ಪಿ.ಸಿ. ಸವಿತಾ, ಗೃಹಿಣಿ, ಸೋಮವಾರಪೇಟೆ.

ಸೋಮವಾರಪೇಟೆ ತಾಲೂಕಿನಲ್ಲಿರುವ ಬಹುತೇಕ ಶಾಲಾ ಮೈದಾನಗಳು ಕೀಡಾಚಟುವಟಿಕೆಗಳಿಗೆ ಯೋಗ್ಯವಾಗಿಲ್ಲ. ಮೈದಾನಗಳ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಈ ಕಾರಣದಿಂದ ಕ್ರೀಡಾ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಮೈದಾನಗಳನ್ನು ವ್ಯವಸ್ಥಿತವಾಗಿ ಸರಿಪಡಿಸಬೇಕು. ಬೇರೆ ಕಾರ್ಯಕ್ರಮಗಳಿಗೆ ಮೈದಾನಗಳನ್ನು ಉಪಯೋಗಿಸಬಾರದು.

ಶ್ರೀನಿವಾಸ್, ಪೌರಕಾರ್ಮಿಕ, ಸೋಮವಾರಪೇಟೆ

ಕೊಡಗಿನಲ್ಲಿ ಮೈದಾನಗಳಿಗೆ ಕೊರತೆ ಇಲ್ಲ. ಆದರೆ ಮೈದಾನಗಳನ್ನು ವಾಹನಗಳ ನಿಲುಗಡೆಗೆ ಬಳಸುವುದು ಹೆಚ್ಚಾಗಿದೆ. ನಗರಗಳಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳ ನಿರ್ಮಾಣ ಮಾಡುತ್ತಿರುವುದೂ ಇದಕ್ಕೆ ಒಂದು ಕಾರಣ. ಕಟ್ಟಡಗಳ ತಳಪಾಯದಲ್ಲಿ ನಿಲುಗಡೆಗೆ ವ್ಯವಸ್ಥೆ ಇರುವ ರೀತಿಯಲ್ಲಿ ನಿರ್ಮಿಸಿದಲ್ಲಿ ಒಂದಿಷ್ಟು ಸಮಸ್ಯೆ ಪರಿಹಾರವಾಗಬಹುದು. ಕೆಲವೊಮ್ಮೆ ಇರುವ ಮೈದಾನಗಳನ್ನೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಉತ್ತಮ ಸೌಕರ್ಯಗಳು ಕೂಡ ಇಲ್ಲ. ಹೋಬಳಿಗಳ ಮಟ್ಟದಲ್ಲಿ ಒಂದೆರಡು ಮೈದಾನಗಳನ್ನು ಸುಸಜ್ಜಿತವಾಗಿಟ್ಟರೆ ಜಿಲ್ಲೆಯಲ್ಲಿ ಮೈದಾನಗಳಿಲ್ಲ ಎಂಬ ಸಮಸ್ಯೆ ಖಂಡಿತ ನೀಗುತ್ತದೆ.

ಕಟ್ಟೆಮನೆ ಸೋನಾಜಿತ್, ಕಟ್ಟೆಮಾಡು, ಮರಗೋಡು

ಸಿದ್ದಾಪುರ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸಾವಿರಾರು ಕ್ರೀಡಾಪಟುಗಳಿದ್ದರೂ, ಒಂದೇ ಒಂದು ಆಟದ ಮೈದಾನ ಇಲ್ಲ. ಸಾರ್ವಜನಿಕ ಮೈದಾನದ ಕೊರತೆಯಿಂದಾಗಿ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತಿಲ್ಲ. ಇದರಿಂದಾಗಿ ಯುವಕರು ಹಾದಿ ತಪ್ಪುತ್ತಿರುವುದರ ಜತೆಗೆ ಆರೋಗ್ಯ ಕೂಡಾ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಎರಡು ಬಾರಿ ಗದ್ದೆಯನ್ನು ಮೈದಾನ ಮಾಡಿ ಕೆ.ಸಿ.ಎಲ್ ಕ್ರಿಕೆಟ್ ಪಂದ್ಯಾಕೂಟ ನಡೆಸಿದ್ದು, ಗದ್ದೆಯನ್ನು ಮೈದಾನವಾಗಿ ಪರಿವರ್ತನೆ ಮಾಡಲು ಸುಮಾರು 5 ಲಕ್ಷದಷ್ಟು ಖರ್ಚು ಮಾಡಬೇಕಾಗುತ್ತೆ. ಆದ್ದರಿಂದ ಆರ್ಥಿಕ ಹೊರೆಯಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆ.ಸಿ.ಎಲ್ ಪಂದ್ಯಕೂಟ ನಡೆಯುತ್ತಿಲ್ಲ.

ಮುಸ್ತಾಫ, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ

ಕ್ರೀಡಾ ಮೈದಾನಗಳು ಕ್ರೀಡಾಪಟುಗಳಿಗೆ ದೊರೆಯದ ಹಿನ್ನೆಲೆಯಲ್ಲಿ ಮೂಲ ಸವಲತ್ತು ದೊರೆಯದೆ ಕ್ರೀಡಾ ಪ್ರತಿಭೆಗಳು ಕಮರಿಹೋಗಲು ಕಾರಣವಾಗಿದೆ. ಸರ್ಕಾರಕ್ಕೆ ಕಟ್ಟುವ ತೆರಿಗೆಯಲ್ಲಿ ಒಂದು ಭಾಗ ಕ್ರೀಡೆಗಾಗಿ ಪಾವತಿಸಲಾಗುತ್ತಿದ್ದು ಅದನ್ನು ಸರ್ಕಾರಗಳು ಮೈದಾನ, ಕ್ರೀಡಾಪಟುಗಳಿಗೆ ವಿನಿಯೋಗಿಸಿದ್ದಲ್ಲಿ ದೇಶದಲ್ಲಿ ಗ್ರಾಮೀಣ ಪ್ರದೇಶದ ಹಲವು ಪ್ರತಿಭೆಗಳು ರಾಷ್ಟç ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಮಿಂಚುವುದರಲ್ಲಿ ಸಂಶಯವಿಲ್ಲ. ಆಟದ ಮೈದಾನಗಳ ಸಂರಕ್ಷಣೆಗೆ ಕಾನೂನು ತರುವ ಅಗತ್ಯವಿದೆ.

ಡಾ. ಶಶಿಕಾಂತ ರೈ, ಮಾಜಿ ಅಧ್ಯಕ್ಷ, ನೇತಾಜಿ ಯೂತ್ ಕ್ಲಬ್, ಕೊಡಗರಹಳ್ಳಿ

ಕೊಡಗಿನಲ್ಲಿ ಮೈದಾನಗಳು ಕ್ರೀಡೆಗಿಂತ ಇತರೆ ಚಟುವಟಿಕೆಗಳಿಗೆ ಹೆಚ್ಚು ಬಳಕೆ ಆಗುತ್ತಿದೆ. ಇದು ಸರಿಯಲ್ಲ. ಮೈದಾನವನ್ನು ಮೈದಾನವಾಗಿ ಉಳಿಸಬೇಕು. ಕೊಡಗಿನಲ್ಲಿ ಸರಿಯಾದ ಮೈದಾನ ವ್ಯವಸ್ಥೆ ಇಲ್ಲದೆ ಅದೆಷ್ಟೋ ಕ್ರೀಡಾಕೂಟ ನಡೆಯುತ್ತಿಲ್ಲ. ಅದೆಷ್ಟೋ ಕ್ರೀಡಾಪಟುಗಳು ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾರೆ. ಸದ್ಯದ ಮಟ್ಟಿಗೆ ವಿರಾಜಪೇಟೆ ವ್ಯಾಪ್ತಿಯ 20 ಮೈದಾನ ಕ್ರೀಡೆಗಾಗಿ ಅಭಿವೃದ್ಧಿ ಪಡಿಸಲಾಗುತಿದ್ದು. ಜಿಲ್ಲಾವ್ಯಾಪ್ತಿ ಎಲ್ಲಾ ಮೈದಾನ ಉಳಿಸಿ ಅಭಿವೃದ್ಧಿಪಡಿಸುವ ಕಾರ್ಯವಾಗಬೇಕು.

ಮಾದಂಡ ತಿಮ್ಮಯ್ಯ, ಅಂತಾರಾಷ್ಟಿçÃಯ ರಗ್ಬಿ ಆಟಗಾರ, ವಿರಾಜಪೇಟೆ

ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತಿದೆ. ವಿಷಯ ಗೊತ್ತಿದ್ದರೂ ಸ್ಥಳೀಯ ಅಧಿಕಾರಿಗಳು ವಾಹನ ನಿಲುಗಡೆಗೆ ಪದೇ ಪದೇ ಜಿಲ್ಲಾ ಕ್ರೀಡಾಂಗಣವನ್ನು ವಾಹನ ನಿಲ್ದಾಣಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ. ಕೂಡಲೇ ಈ ಮೈದಾನವನ್ನು ದುರಸ್ಥಿಪಡಿಸಿ ದೈನಂದಿನ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಈ ಮೈದಾನದ ಒಳಗೆ ವಾಹನಗಳ ಪ್ರವೇಶಕ್ಕೆ ಅವಕಾಶ ಕೊಡಬಾರದು.

ಉಮೇಶ್‌ಕುಮಾರ್, ಮಡಿಕೇರಿ ನಿವಾಸಿ

ಕ್ರೀಡಾ ಜಿಲ್ಲೆ ಹೆಗ್ಗಳಿಕೆಯ ಕೊಡಗಿನಲ್ಲಿ ಕ್ರೀಡಾಕೂಟ ನಡೆಸಲು ಅಥವಾ ಅಭ್ಯಾಸ ಮಾಡಲು ಸೂಕ್ತ ಆಟದ ಮೈದಾನಗಳು ಇಲ್ಲ. ಇರುವ ಮೈದಾನಗಳು ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತಿದೆ. ವಾಹನ ನಿಲುಗಡೆ, ವ್ಯಾಪಾರಿ ಮೇಳ, ವಾಹನ ಚಾಲನೆ ಕಲಿಯಲು ಮೈದಾನಗಳನ್ನು ಉಪಯೋಗಿಸುವುದರಿಂದ ಅಲ್ಲಿ ಆಟವಾಡುವ ವಾತಾವರಣ ನಿರ್ಮಾಣ ಆಗಲು ಹೇಗೆ ಸಾಧ್ಯ ? ಆಟದ ಮೈದಾನಗಳನ್ನು ಕಡ್ಡಾಯವಾಗಿ ಆಟವಾಡಲು ಮಾತ್ರ ಸೀಮಿತ ಮಾಡಬೇಕು.

ನಿಡ್ಯಮಲೆ ದಿನೇಶ್, ಕುಶಾಲನಗರ

ಇಂದು ಜಿಲ್ಲೆಯಲ್ಲಿ ಇರುವುದು ಒಂದಿಷ್ಟು ಬೆರಳೆಣಿಕೆಯ ಕ್ರೀಡಾಂಗಣಗಳು ಮಾತ್ರ. ಇಲ್ಲಿಯೇ ಜಿಲ್ಲೆಯ ಕ್ರೀಡಾ ಪ್ರತಿಭೆಗಳು ಅರಳಬೇಕು. ಆದರೆ ಈ ಕ್ರೀಡಾಂಗಣಗಳು ದಸರಾ ಉತ್ಸವ ಮತ್ತು ಇನ್ನಿತರ ಮೇಳಗಳಿಗೆ ನೀಡಲಾಗುತ್ತಿದೆ. ಇದರಿಂದ ಕ್ರೀಡಾ ಚಟುವಟಿಕೆ ಕುಂಟಿತವಾಗುತ್ತಿದೆ. ಇನ್ನಾದರೂ ಕ್ರೀಡಾಂಗಣ ಕ್ರೀಡೆಗೇ ಮೀಸಲಿರಲಿ.

ಆರ್ ಸುಭೀಶ್, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ

ಕೊಡಗು ಕ್ರೀಡೆಯಲ್ಲಿ ಮುಂದಿತ್ತು, ಈ ಹಿಂದೆ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಹ ಒಂದೊAದು ಆಟದ ಮೈದಾನವಿತ್ತು. ಪ್ರತಿ ನಿತ್ಯ ಸಂಜೆ ಯುವಕರು ಆ ಮೈದಾನದಲ್ಲಿ ವಿವಿಧ ಕ್ರೀಡೆಗಳನ್ನು ಬಿಡುವಿನ ವೇಳೆ ಆಟ ಆಡುತಿದ್ದರು. ಆದರೆ ಇಂದು ಅನೇಕ ಮೈದಾನಗಳು ವಾಹನ ನಿಲುಗಡೆಯ ತಾಣವಾಗಿ ಮಾರ್ಪಡಾಗಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ, ಇರುವ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಬೇಕು, ಕ್ರೀಡಾ ಮೈದಾನಗಳನ್ನು ಕ್ರೀಡೆಗೆ ಮಾತ್ರ ಬಳಕೆ ಮಾಡಬೇಕು.

ಅನೀಸ್ ಬಿ.ಎಂ., ವರ್ತಕ, ಶನಿವಾರಸಂತೆ

ಇತ್ತೀಚೆಗೆ ನಡೆದ ದಸರಾ ಸಮಾರಂಭದಿAದ ಮೈದಾನಗಳು ತೀರಾ ಹದಗೆಟ್ಟು ಹೋಗಿದೆ. ಮಕ್ಕಳು ತರಬೇತಿ ಪಡೆಯಲು ಆಗದ ರೀತಿ ಇದೆ. ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿದ್ದಾರೆ. ಹೀಗೆ ಆದರೆ ಕ್ರೀಡಾಸಕ್ತಿ ಹಿಂದುಳಿಯುವAತೆ ಆಗುತ್ತದೆ. ಕೂಡಲೇ ಮೈದಾನವನ್ನು ಮೊದಲಿನಂತೆ ಕ್ರೀಡೆಗೆ ಸಜ್ಜುಗೊಳಿಸಿ ಕೊಡಬೇಕು.

ಮಾಂಗೇರ ಕ್ವೀನ್, ಸಮಾಜ ಸೇವಕಿ, ಗೋಣಿಕೊಪ್ಪ

ಮಡಿಕೇರಿ ನಗರದಲಿ ಇರುವ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಸಂದರ್ಭದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಹೆಚ್ಚಿನ ಮಳೆಯೂ ಬಂದಿದ್ದರಿAದ ಮರಳು ಅಳವಡಿಸಿ ಸುಸ್ಥಿತಿಯಲ್ಲಿಡುವಂತೆ ಪೌರಾಯುಕ್ತರು ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಸೂಚನೆ ನೀಡಲಾಗಿದೆ.

ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ