ಹೊಳಲ್ಕೆರೆ: ಇಂದಿನ ಆಹಾರ ಪದ್ಧತಿಗೆ ಚಿಕ್ಕ ವಯಸ್ಸಿನವರು ತುತ್ತಾಗುತ್ತಿರುವುದು ಬೇಸರ ತರಿಸಿದೆ. ಮಕ್ಕಳು ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಸಮಸ್ಯೆಯಿಂದ ದೂರ ಇರಬಹುದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಅಭಿಪ್ರಾಯಪಟ್ಟರು.
ಭರಮಸಾಗರದ ಯಳಗೋಡು ಗ್ರಾಮದಲ್ಲಿ ಬುಧವಾರ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕವಾಗಿದೆ ಎಂದರು.
ಕಳೆದ 40 ವರ್ಷಗಳಿಂದ ನಾನು ಒಂದು ಮಾತ್ರೆಯನ್ನು ನುಂಗಿಲ್ಲ. ಆರೋಗ್ಯದ ಕಡೆ ಹೆಚ್ಚು ಗಮನವಹಿಸುತ್ತೇನೆ. ಮಕ್ಕಳು ಕೂಡ ಚಿಕ್ಕವರಿದ್ದಾಗಲೇ ಶಿಸ್ತಿನ ಜೀವನ ರೂಢಿಸಿಕೊಳ್ಳಬೇಕು.
ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಮನವರಿಕೆ ಮಾಡಿದರು. ಕ್ರೀಡಾಕೂಟದಲ್ಲಿ 30 ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ಅನಿತ ನಾಗರಾಜ್, ಸದಸ್ಯರಾದ ಕೆ.ಆರ್.ಬಸವರಾಜ್, ರುದ್ರೇಶ್, ನಾರಪ್ಪ, ಪರಮೇಶ್ವರಪ್ಪ, ರಾಜುನಾಯ್ಕ, ಹನುಮಂತಪ್ಪ, ರಾಜಪ್ಪ, ಜಯಣ್ಣ, ಚಿದಾನಂದಸ್ವಾಮಿ, ಕೃಷ್ಣಮೂರ್ತಿ, ಶರಣಪ್ಪ, ಗೀತಾ, ಕಲ್ಲೇಶ್ ಇತರರಿದ್ದರು.