ಕಡಬ: ಕೇವಳ ಹನುಮಾನ್ ನಗರದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಬುಧವಾರ ನಡೆಯಿತು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ ಕ್ರೀಡೋತ್ಸವ ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಮೈಸೂರು ವಿಜಯನಗರ ಠಾಣಾಧಿಕಾರಿ ಸುರೇಶ್ ಎಸ್.ಡಿ, ದಿಶಾ ಪವರ್ ಕಾರ್ಪೊರೇಷನ್‌ನ ದಿವಾಕರ ಶೆಟ್ಟಿ, ಇಂಜಿನಿಯರ್ ಶರತ್ ರಾವ್, ಮಂಗಳೂರು ಎಂಪೈರ್ ಮಾಲ್ ಸಿಇಒ ಡಾ.ರಾಘವೇಂದ್ರ ಹೊಳ್ಳ, ರಾಮಚರಣ್ ರೈ ಬಲ್ಯ ಶುಭಹಾರೈಸಿದರು.
ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಶಾರೀರಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್, ಹಳೇ ವಿದ್ಯಾರ್ಥಿ ರಾಮ್‌ಪ್ರಕಾಶ್ ರೈ ಕೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣ ಶೆಟ್ಟಿ ಕಡಬ, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ, ಆಂಗ್ಲ ಮಾಧ್ಯಮ ವಿಭಾಗದ ಕಾರ್ಯದರ್ಶಿ ಅಜಿತ್ ಆರ್ತಿಲ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಾಧವ ಕೊಲ್ಪೆ, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ವೇತಾ ಕುಂದರ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಶೈಲಶ್ರೀ ಎಸ್. ಮೊದಲಾದವರು ಉಪಸ್ಥಿತರಿದ್ದರು.
ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸವಿತಾ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ವಿಭಾಗದ ಅಧ್ಯಕ್ಷ ಸದಾಶಿವ ಭಟ್ ವಂದಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ದ್ವಿಚಕ್ರ ವಾಹನ, ಸೈಕಲ್ ಸಮತೋಲನ ಕ್ರೀಡೆ, ಮಲ್ಲ ಕಂಬ, ಕೂಪಿಕಾ ಸಮತೋಲನ ಮೊದಲಾದ ಸಾಹಸಮಯ ಕ್ರೀಡೆಗಳು, ನೃತ್ಯ ಮೊದಲಾದವುಗಳು ಮನಸೂರೆಗೊಂಡವು.