ಕೋಟ: ಕೋಟದ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾ ಕೂಟ ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಕ್ರೀಡೋತ್ಸವವನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಾಂಶುಪಾಲ ಪ್ರೊ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್.ಕುಂದರ್, ಪ್ರೊ.ರಮೇಶ ಆಚಾರ್, ಡೆನಿಸ್ ಬಾಂಜಿ, ವಿವೇಕಾನಂದ ಗಾಂವ್ಕರ್, ಮಂಜುನಾಥ ಕೆ.ಎಸ್, ಸುದಿನ, ಶೇಯಸ್, ರಕ್ಷಾ ಉಪಸ್ಥಿತರಿದ್ದರು. ಡಾ.ಮನೋಜ್‌ಕುಮಾರ್ ಎಂ. ಸ್ವಾಗತಿಸಿದರು. ಮಮತಾ ನಿರೂಪಿಸಿದರು. ಬೋಧಕ-ಬೋಧಕೇತರ ವೃಂದದವರು ವಿವಿಧ ಕ್ರೀಡಾ ಚಟುವಟಿಕೆ ಆಯೋಜಿಸಿ ಸಹಕರಿಸಿದರು. ನಾರಾಯಣ ಮೊಗವೀರ, ಚಂದ್ರಶೇಖರ ಶೆಟ್ಟಿ ಹಾಗೂ ಕುಮಾರ ತೀರ್ಪುಗಾರರಾಗಿ ಸಹಕರಿಸಿದರು.