ಜಿಲ್ಲೆ

ಕ್ರೀಡಾ ಚಟುವಟಿಕೆ ತರಲಿದೆ ಆರೋಗ್ಯ

ಧನಂಜಯ ಎಸ್.ಹಕಾರಿ.

ಪರಶುರಾಮಪುರ: ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಪದ್ಮಾ ಬಸವರಾಜು ಹೇಳಿದರು.

ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪರಶುರಾಮಪುರ ವಲಯ 2ರ ಹಿರಿಯ ಪ್ರಾಥಮಿಕ ಶಾಲಾ

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡಾ ಚಟುವಟಿಕೆ, ಧ್ಯಾನ, ಒಳ್ಳೆಯ ಕೃತಿಗಳ ಓದು ದೈಹಿಕ-ಮಾನಸಿಕ ಆರೋಗ್ಯಕ್ಕೆ ಸಹಕಾರಿ ಆಗಲಿದೆ ಎಂದು ಹೇಳಿದರು.

ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲ ಶಾಲೆಗಳ ವಿದ್ಯಾರ್ಥಿಗಳೂ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಶಿಕ್ಷಕರು ಗಮನಹರಿಸಬೇಕು ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರಸ್ವಾಮಿ, ಇಸಿಒ ರವಿಶಂಕರ ಮಾತನಾಡಿದರು. ಕ್ರೀಡಾಕೂಟದಲ್ಲಿ ಗುಂಪು ಮತ್ತು ವೈಯಕ್ತಿಕ ಆಟಗಳನ್ನು ಆಯೋಜಿಸಲಾಗಿತ್ತು.

ಗ್ರಾಪಂ ಸದಸ್ಯರಾದ ಓಬಳೇಶಪ್ಪ, ಸೀನಪ್ಪ, ಮಾಜಿ ಅಧ್ಯಕ್ಷ ಒ.ಬೈಲಪ್ಪ, ಶಾಲಾ ಸಮಿತಿ ಅಧ್ಯಕ್ಷ ಬಸವರಾಜು, ಸದಸ್ಯರಾದ ವಿಜಯ,

ಕವಿತಾ, ಶಿಕ್ಷಕರ ಸಂಘದ ಪದಾಧಿಕಾರಿ ಡಿ.ಟಿ.ಹನುಮಂತರಾಯ, ಸಿ.ತಿಪ್ಪೇಸ್ವಾಮಿ, ಚನ್ನಕೇಶವ, ಕರಿಯಣ್ಣ, ಕೃಷ್ಣಪ್ಪ, ಕಮಲಮ್ಮ ಇತರರಿದ್ದರು.