ತೇರದಾಳ:ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯದೊಂದಿಗೆ ವಿವಿಧ ಕ್ರೀಡೆಗಳಲ್ಲಿ ಉತ್ಸುಕತೆಯಿಂದ ಭಾಗವಹಿಸುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಜೊತೆಗೆ ದೇಶವು ಭವಿಷ್ಯತ್ತಿನಲ್ಲಿ ಸದೃಢ ನಾಗರಿಕತ್ವ ಹೊಂದಲು ಸಾಧ್ಯವಾಗುತ್ತದೆ ಎಂದು ಕಮರಿಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ಪ್ರಾಥಮಿಕ ಶಾಲೆಯ ಮಕ್ಕಳು ತೇರದಾಳ ಪೂರ್ವ ವಲಯ 14 ವರ್ಷದೊಳಗಿನ ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ್ದಕ್ಕೆ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶ್ರೀಮಠದ ಶಾಲಾ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಅವರ ಭವಿಷ್ಯ ಉಜ್ವಲವಾಗಲಿ ಎಂದರು.
ಶ್ರೀಮಠದ ಶಾಲಾ ಮಕ್ಕಳು ಬಾಲಕರ ವಿಭಾಗದಲ್ಲಿ ಖೋಖೋ ಮತ್ತು ಥ್ರೋಬಾಲ್ನಲ್ಲಿ ಪ್ರಥಮ, ಕಬಡ್ಡಿ ದ್ವೀತಿಯ, ಬಾಲಕಿಯರ ವಿಭಾಗದ ಖೋಖೋ, ಕಬಡ್ಡಿ ಪ್ರಥಮ, ಥ್ರೋಬಾಲ್ ದ್ವೀತಿಯ, ವೈಯಕ್ತಿಕ ಆಟಗಳಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಮುಖ್ಯಗುರು ಸೋಮಶೇಖರ ಜಿ.ಎಸ್.., ದೈಹಿಕ ಶಿಕ ನಾರವಗೋಳ, ಮಾರ್ಗದರ್ಶಿ ಶಿಕ ಎಚ್.ಜಿ ಕುರಿ ಇದ್ದರು.
ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಪ್ರಾಥಮಿಕ ಶಾಲೆ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಮರಿಮಠದ ಶಿವಾನಂದ ಸ್ವಾಮೀಜಿ ಅಭಿನಂದಿಸಿದರು. ಮುಖ್ಯಗುರು ಸೋಮಶೇಖರ ಜಿ.ಎಸ್. ಎಚ್.ಜಿ. ಕುರಿ, ದೈಹಿಕ ಶಿಕ್ಷಣ ಶಿಕ ನಾರವಗೋಳ ಇದ್ದರು.