ವಿಜಯವಾಣಿ ಸುದ್ದಿಜಾಲ ಧಾರವಾಡ
ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ. ಹೀಗಾಗಿ ನಿತ್ಯ ಯೋಗ, ಪ್ರಾಣಾಯಾಮ ಮತ್ತು ಕ್ರೀಡೆಯಲ್ಲಿ ಪಾಲ್ಗೊಂಡು ಸದೃಢ ಭಾರತ ಕಟ್ಟೋಣ ಎಂದು ಕ್ರೀಡಾಪಟು ಮಿಲನ್ ಕಾಂಬಳೆ ಹೇಳಿದರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳಬಾರದು. ಪ್ರತಿಯೊಬ್ಬರಲ್ಲೂ ಅಗಾಧ ಸಾಮರ್ಥ್ಯ ಅಡಗಿದೆ. ನಮ್ಮಲ್ಲಿ ಆತ್ಮ ವಿಶ್ವಾಸ, ದೃಢತೆ ಇದ್ದರೆ ಮಾತ್ರ ಸಾಧನೆ ಸಾಧ್ಯ ಎಂದರು.
ಶಾಲೆ ಪ್ರಾಚಾರ್ಯೆ ಡಾ. ಅನಿತಾ ರೈ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಂದನಾ, ಪಥ ಸಂಚಲನ, ಧ್ವಜಾರೋಹಣ, ಪ್ರತಿಜ್ಞಾವಿಧಿ ಸ್ವೀಕಾರ, ಕ್ರೀಡಾ ಜ್ಯೋತಿ ಆಗಮನ ಜರುಗಿತು.
ಶಾಲೆ ಉಪ ಪ್ರಾಚಾರ್ಯ ಕೃಷ್ಣ ಜೋಶಿ, ದೈಹಿಕ ಶಿಕ್ಷಣ ಮುಖ್ಯಸ್ಥ ಮಹಾಂತೇಶ ದೇಗಾವಿ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ ಪಟಗಾರ, ದೇವರಾಜ ಎನ್., ಶಿಕ್ಷಕರು, ಇತರರು ಇದ್ದರು.
ಸಂಜೀವ ಕೆ.ಎ. ಸ್ವಾಗತಿಸಿದರು. ಸಮೃದ್ಧ ಗೌಳಿ ನಿರೂಪಿಸಿದರು. ಪ್ರೀತಂ ಗಿಂಡಿ ವಂದಿಸಿದರು.