ಸಿಂಧನೂರು ಸತ್ಯಗಾರ್ಡನ್‌ನಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಎಂಎಲ್‌ಸಿ ಬಸನಗೌಡ ಬಾದರ್ಲಿ ಉದ್ಘಾಟಿಸಿದರು. ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್‌ಅಲಿ ಉಡುಪಿ, ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಜಾಫರ ಜಹಗೀರದಾರ, ನಗರಸಭೆ ಸದಸ್ಯ ಶಬ್ಬೀರ್ ಅಹ್ಮದ್, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಅಧ್ಯಕ್ಷ ಲಬೀದ್ ಶಾಫಿ ಇತರರಿದ್ದರು. 
ಜಿಲ್ಲೆ

ಕ್ರೀಡೆಗಳು ಜೀವನದ ಅವಿಭಾಜ್ಯವಾಗಲಿ

ರುದ್ರಪ್ಪ ವಾಲಿ

ಸಿಂಧನೂರು: ಗ್ರಾಮೀಣ ಕ್ರೀಡೆಗಳತ್ತ ಯುವಕರು ಹೆಚ್ಚು ಆಸಕ್ತಿ ವಹಿಸಿ, ಅವುಗಳನ್ನು ಉಳಿಸಿ ಬೆಳೆಸಬೇಕು ಎಂದು ಎಂಎಲ್‌ಸಿ ಬಸನಗೌಡ ಬಾದರ್ಲಿ ಹೇಳಿದರು.

ನಗರದ ಸತ್ಯಗಾರ್ಡನ್‌ನಲ್ಲಿ ಶನಿವಾರ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ದೇಸಿ ಕ್ರೀಡೆಗಳನ್ನು ಉಳಿಸಿದರೆ ನಮ್ಮತನ ಉಳಿಸಿದಂತಾಗುತ್ತದೆ. ಗ್ರಾಮೀಣ ಕ್ರೀಡೆಗಳಿಂದ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯ. ವಯಸ್ಸಿನ ಮಿತಿಯಿಲ್ಲದೇ ಎಲ್ಲರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ದೈಹಿಕವಾಗಿ ಬಲ ಹೊಂದಲು ಈ ಕ್ರೀಡೆಗಳು ಸಹಕಾರಿಯಾಗಿವೆ. ಯುವ ಪೀಳಿಗೆ ಕ್ರೀಡೆಯನ್ನು ಜೀವನ ಕ್ರಮದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದರು.

ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್‌ಅಲಿ ಉಡುಪಿ ಮಾತನಾಡಿ, ಸಾಲಿಡಾರಿಟಿ ಸಂಘಟನೆಯು ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಕರನ್ನು ಪ್ರೋತ್ಸಾಹಿಸುತ್ತಿದೆ ಎಂದರು.

ಪ್ರಮುಖರಾದ ಸೈಯ್ಯದ್ ಸಾದಿಕ್ ಹುಸೇನಿ, ದಿಲಾವರ ಅಂಬರ್‌ಖಾನ್ ದೇಸಾಯಿ, ಮೌಲಾನಾ ತಾಜೀಮುದ್ದೀನ್ ಸಾಹಾಬ್, ಅಸದುಲ್ಲಾ ಖಾನ್ ಝುಕೀ, ಅಬ್ದುಲ್ ಹಸೀಬ್ ತರಫ್‌ದಾರ್, ಇಸ್ಮಾಯಿಲ್ ತೀರ್ಥಹಳ್ಳಿ, ಡಾ.ವಸೀಂ, ತನ್ವೀರ್ ಅಹ್ಮದ್ ಇತರರು ಇದ್ದರು.