ಜಿಲ್ಲೆ

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಹಿರೇಕೆರೂರ: ಕ್ರೀಡೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತದೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟಿಸಿ ಅವರು ಮಾತನಾಡಿದರು. ‘ಮೇಜರ್ ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯರು. ಪರಿಪೂರ್ಣ ವ್ಯಕ್ತಿತ್ವ ಎಂದರೆ ಬರಿ ಓದು ಅಲ್ಲ. ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಗತ್ತಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗದೇ ಇರುವುದು ಕ್ರೀಡೆಗಳ ಬಗ್ಗೆ ನಮಗಿರುವ ಅಸಡ್ಡೆಯೇ ಕಾರಣ’ ಎಂದರು.

ಪ್ರಾಧ್ಯಾಪಕಿ ಹೇಮಲತಾ ಕೆ, ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಮಾಗಳದ ಮಾತನಾಡಿದರು. ಕ್ರೀಡಾ ವಿಭಾಗದ ಸಂಚಾಲಕ ಪ್ರಸನ್ನಕುಮಾರ ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಎಂ.ಬಿ. ಬದನಿಕಾಯಿ., ಸುಮಲತಾ.ಬಿ.ಎನ್., ಉಪನ್ಯಾಸಕರು, ಸಿಬ್ಬಂದಿ ಇದ್ದರು. ನವೀನ ಎಂ. ನಿರ್ವಹಿಸಿದರು.