ಬನಹಟ್ಟಿ ಕೆಎಚ್‌ಡಿಸಿ ಕಾಲೋನಿಯ ಶ್ರೀ ಜೇಡರ ದಾಸಿಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಚಂದ್ರಪ್ರಭ ಬಾಗಲಕೋಟ, ಸುನೀತಾ ಸಂಗೆ ಇದ್ದರು. 
ಜಿಲ್ಲೆ

ಇಂದಿನ ಯುವ ಪೀಳಿಗೆಗೆ ಕ್ರೀಡೆಗಳು ಅವಶ್ಯಕ

ದತ್ತಾತ್ರೇಯ ಪಿ ಕುಲಕರ್ಣಿ

ರಬಕವಿ/ಬನಹಟ್ಟಿ : ನಮ್ಮ ಬದುಕಿಗೆ ನೆಮ್ಮದಿ ನೀಡಲು ಮತ್ತು ದೈಹಿಕ, ಮಾನಸಿಕ ಚೈತನ್ಯ ಸಮತೋಲನವಾಗಿರಲು ಕ್ರೀಡೆಗಳು ಅವಶ್ಯಕವಾಗಿರ ಬೇಕು ಎಂದು ಅವಳಿ ನಗರದ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಚಂದ್ರಪ್ರಭ ಬಾಗಲಕೋಟ ಹೇಳಿದರು.

ಆಸಂಗಿ ಕೆಎಚ್‌ಡಿಸಿ ಕಾಲೋನಿಯ ಶ್ರೀ ಜೇಡರ ದಾಸಿಮಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಿ ಕ್ರೀಡೆಗಳು ಸೇರಿದಂತೆ ಎಲ್ಲ ಸ್ತರದ ಕ್ರೀಡಾಪಟುಗಳಿಗೆ ಪರಿಣತಿ ಹೊಂದಲು ಸರ್ಕಾರದ ಸೌಲಭ್ಯ ಸಿಗಬೇಕು, ಮತ್ತು ಇಂದಿನ ಯುವ ಪೀಳಿಗೆಯು ಕ್ರೀಡೆಗಳತ್ತ ಆಸಕ್ತಿ ಮೂಡಿಸುವಂತೆ ಪೋತ್ಸಾಹ ನೀಡುವುದು ಅತ್ಯವಶ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ಲೋಬಲ್ ಎಜುಕೇಷನ್ ಸಂಸ್ಥೆಯ ಕೋ ೌಂಡರ್ ಮಂಜುನಾಥ ಬೆಳ್ಳವರಿ, ಶಾಲಾ ಮುಖ್ಯ ಗುರುಮಾತೆ ಸುನೀತಾ ಸಿಂಗೆ ಅನೇಕರಿದ್ದರು. ಶಿಕ್ಷಕ ಮಹೇಶ ಚಿಕ್ಕೂರ, ಶತಿ ಮುಗಳೊಳ್ಳಿ, ಸ್ವಾತಿ ಬಾಣಕಾರ, ಭಾಗ್ಯಶ್ರೀ ಮಂಡಿ, ಸವಿತಾ ರಾಥೋಡ, ಪ್ರೀತಿ ಪಾಟೀಲ, ಲಕ್ಷ್ಮೀ ಬದಾಮಿ, ಅಶ್ವಿನಿ ಬಸಪ್ಪಗೋಳ, ಶಾಲಾ ಮಕ್ಕಳು ಇದ್ದರು.