ಬೈಂದೂರು: ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯ. ಕ್ರೀಡಾ ಪ್ರತಿಭೆ ಗುರುತಿಸಲು ಮತ್ತು ಪ್ರೋತ್ಸಾಹಿಸಲು ಕ್ರೀಡಾಕೂಟ ಸಹಕಾರಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಧ್ವಜಾರೋಹಣಗೈದು, ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು. ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಆರ್‌ಎಫ್‌ಒ ಸಂದೇಶ್ ಕುಮಾರ್, ಬಿಇಒ ನಾಗೇಶ್ ಕೆ.ನಾಯ್ಕ, ಕ್ರೀಡಾ ಸಂಚಾಲಕ ಡಾ.ಶಿವಕುಮಾರ ಪಿ.ವಿ ಪ್ರಸ್ತಾವಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ ಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ಐಕ್ಯುಎಸಿ ಸಂಚಾಲಕಿ ಚಿತ್ರ ಪಡಿಯಾರ್, ಸವಿತಾ, ವಿನೋದ್ ಬಸುಪಟ್ಟದ್, ನವೀನ್ ಎಚ್.ಜೆ., ಬೋಧಕ-ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹರ್ಷಿತಾ ಪ್ರಾರ್ಥಿಸಿದರು. ಅಕ್ಷತಾ ಎಲ್. ಸ್ವಾಗತಿಸಿದರು. ಸುಹರ್ಷಿಣಿ ನಿರೂಪಿಸಿದರು. ಸೌಜನ್ಯಾ ವಂದಿಸಿದರು.