ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ತೇರದಾಳ ಪೂರ್ವ ವಲಯಮಟ್ಟದ ಕ್ರೀಡಾಕೂಟಕ್ಕೆ ಗಣ್ಯರು ಚಾಲನೆ ನೀಡಿದರು. ಕಮರಿಮಠದ ಶಿವಾನಂದ ಶ್ರೀ, ಜಿನ್ನಪ್ಪ ಚೌಗಲಾ, ಗ್ರಾಪಂ ಅಧ್ಯಕ್ಷ ಜಕ್ಕವ್ವ ಉಗಾರ ಇದ್ದರು. 
ಜಿಲ್ಲೆ

ಮಕ್ಕಳ ಕ್ರಿಯಾಶೀಲತೆಗೆ ಕ್ರೀಡೆಗಳು ಅವಶ್ಯ

ತೇರದಾಳ : ಕ್ರೀಡೆಗಳಿಂದ ಮಕ್ಕಳು ಮಾನಸಿಕ ಹಾಗೂ ಶಾರೀರಿಕ ಸದೃಢವಾಗಲು ಸಾಧ್ಯ ಎಂದು ಕಮರಿಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ತೇರದಾಳ ಪೂರ್ವ ವಲಯದ ಪ್ರಾಥಮಿಕ ಶಾಲೆ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರಂತರ ಪರಿಶ್ರಮ, ಚಿಂತನಶೀಲತೆ ಹಾಗೂ ಅಧ್ಯಯನಗಳು ಮಕ್ಕಳ ಭವಿಷ್ಯ ರೂಪಿಸಲು ಬಹುಮುಖ್ಯ ಪಾತ್ರವಹಿಸುತ್ತವೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಮಕ್ಕಳು ಶಿಕ್ಷಣಕ್ಕಾಗಿ ಬಳಸದೆ ಅನವಶ್ಯಕವಾಗಿ ವ್ಯರ್ಥ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ತಂತ್ರಜ್ಞಾನವು ಶಿಕ್ಷಣಕ್ಕೆ ಪೂರಕವಾಗಲಿ ಎಂದರು.

ಸಿಆರ್‌ಪಿ ಮಹೇಶ ಸೋರಗಾಂವಿ, ಕ್ರೀಡಾಜ್ಯೋತಿ ಉದ್ಘಾಟಿಸಿದ ಬಿಆರ್‌ಸಿ ಅವಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಭವಿಷ್ಯ ರೂಪಿಸಲು ಕ್ರೀಡೆಗಳು ಸಹಕಾರಿ ಎಂದರು.

ಕ್ರೀಡಾಕೂಟದ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷ ಜಕ್ಕವ್ವ ಭೀಮಪ್ಪ ಉಗಾರ ನೆರವೇರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಜಿನ್ನಪ್ಪ ಚೌಗಲಾ, ಗಂಗಪ್ಪ ಘನವಾಡಿ, ಪಿಡಿಒ ತೇಜಸ್ವಿನಿ ಮರೆಗುದ್ದಿ, ಬಿಆರ್‌ಸಿ ಶಿವು ಯಾದವಾಡ, ಶಿಕ್ಷಣ ಸಂಯೋಜಕ ಹಳೆಮನಿ, ಪಾಂಡುರಂಗ ಪತ್ತಾರ, ಶಾಲೆ ದೈಹಿಕ ಶಿಕ್ಷಕ ಎಚ್.ಬಿ.ಕಾಂಬಳೆ, ಮುಖ್ಯಗುರು ಸೋಮಶೇಖರ ಜಿ.ಎಸ್ ಸೇರಿ ಸಂಸ್ಥೆ ಸದಸ್ಯರು, ಗ್ರಾಮದ ಹಿರಿಯರು, ವಿವಿಧ ಶಾಲೆ ದೈಹಿಕ ಶಿಕ್ಷಕರು ಇದ್ದರು.