ಜಿಲ್ಲೆ

ಜೀವನದ ಅವಿಭಾಜ್ಯ ಅಂಗ ಕ್ರೀಡೆ

ಹುಬ್ಬಳ್ಳಿ: ಇಲ್ಲಿಯ ಹೊಸೂರ- ಉಣಕಲ್ ರಸ್ತೆಯಲ್ಲಿರುವ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮಂಗಳವಾರ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಅಕಾಡೆಮಿ ಎಂಡಿ ವೀರೇಶ ಉಂಡಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ರೀಡೆ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದು ನಾವೆಲ್ಲರೂ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಭಾರತದ ಹಾಕಿ ತಂಡವು 1936ರಲ್ಲಿ ಇದೇ ದಿನದಂದು ಜರ್ಮನಿಯ ನೆಲದಲ್ಲಿ ವಿಜಯದ ಪತಾಕೆ ಹಾರಿಸಿತ್ತು. ಅಂದು ವಿದೇಶದಲ್ಲಿಯೂ ಭಾರತದ ತ್ರಿವರ್ಣ ಹಾರಾಡಿದ್ದು ಹೆಮ್ಮೆಯ ಸಂಗತಿ ಎಂದರು.

ಸಂಯೋಜಕಿ ಜ್ಯೋತಿ ಯರ್ಲಗಟ್ಟಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಉಪಾಹಾರ, ಸಿಹಿ ವಿತರಿಸಲಾಯಿತು.

ಅಕಾಡೆಮಿಯ ತರಬೇತುದಾರರಾದ ದಯಾನಂದ ಶೆಟ್ಟಿ, ಸಾದಿಕ್ ಕಿತ್ತೂರ, ಆನಂದ ಪಾಟೀಲ, ಅಭಯ, ರಾವೇಂದ್ರ ಅನಗೋಳಕರ ಇತರರು ಉಪಸ್ಥಿತರಿದ್ದರು.