ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳ ದೇಹ ಸದೃಢವಾಗಿದ್ದರೆ ಮಾತ್ರ ಅವರ ಮನಸ್ಸು ಸದೃಢವಾಗಿರಲು ಸಾಧ್ಯ, ಆದ್ದರಿಂದ ವಿದ್ಯಾಥಿರ್ಗಳು ಓದಿನ ಜೊತೆಗೆ ಕ್ರೀಡೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತೋಂಟದಾರ್ಯ ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂದ ಗೌರವ ಸಲಹೆಗಾರ ಎಂ.ಸಿ ಉಪ್ಪಿನ ಹೇಳಿದರು.
ಇತ್ತೀಚೆಗೆ ನಗರದ ತೋಂಟದಾರ್ಯ ವಿದ್ಯಾಪಿಠದ ತೋಂಟದ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ದೈಹಿಕ ಬೆಳವಣಿಗೆ ಆಗುವುದರ ಜತೆಗೆ ವಿದ್ಯಾಥಿರ್ಗಳಲ್ಲಿ ಹೊಸ ಚೈತನ್ಯ ಮೂಡುತ್ತದೆ ಮತ್ತು ವಿದ್ಯಾಥಿರ್ಗಳಲ್ಲಿ ನಾಯಕತ್ವ ಗುಣ ಬೆಳಯುತ್ತದೆ. ಪಠ್ಯದ ಜೊತೆಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳು ಶಿಣದ ಅವಿಭಾಜ್ಯ ಅಂಗಗಳಾಗಿದ್ದು, ವಿದ್ಯಾಥಿರ್ಗಳಲ್ಲಿನ ಪ್ರತಿಭೆಯನ್ನು ಗುರುತಿಸಲು ಸಹಾಯಕವಾಗಿವೆ ಎಂದರು.
ಅಧ್ಯತೆ ವಹಿಸಿದ್ದ ಕಾಲೇಜಿನ ಉಪ ಪ್ರಾಚಾರ್ಯ ವೈ. ಎಸ್. ಮತ್ತೂರ ಮಾತನಾಡಿ, ಕ್ರೀಡಾಳುಗಳು ಕ್ರೀಡೆಯನ್ನು ಗೌರವಿಸಬೇಕು. ಸಮಯ ಪಾಲನೆಗೆ ಆದ್ಯತೆ ನೀಡಬೇಕು.ನಿರಂತರ ತರಬೇತಿ ಪಡೆದು ಧನಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು. ಕಾಲಹರಣಕ್ಕಾಗಿ ಕ್ರೀಡೆಯಲ್ಲಿ ತೊಡಗದೇ ಕ್ರೀಡೆಯ ನೀತಿ ನಿಯಮಗಳಿಗೆ ಬದ್ಧರಾಗಿ ಆಟವಾಡಿ ಯಶಸ್ಸುಗಳಿಸಬೇಕು ಎಂದರು.
ಎ್, ಆರ್, ದೊಡ್ಡಣ್ಣವರ, ಶಿಲ್ಪಾ ಸಿಂಧೂರ, ಶ್ವೇತಾ ನಿಲೂಗಲ್, ರಾಧಾ ಕಿಲಾರಿ, ಎನ್.ವಿ ಕಡಗದ, ಕೆ.ಎಸ್, ಮಲ್ಲಾಪೂರ, ವೀರಮ್ಮ ಮಡಿವಾಳರ, ಮಹಮ್ಮದ ಸಿದ್ಧಿಕ, ಈರಣ್ಣ ಅರಗಿನಶೆಟ್ಟಿ, ಕವಿತಾ ಪೂಜಾರ ಹಲವರು ಇದ್ದರು.