ಹನೂರು: ಚಾಮರಾಜನಗರ ಕ್ರೀಡಾಂಗಣದಲ್ಲಿ ಅ.26ರಂದು ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಹನೂರು ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗ: ಬಾಲಕರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಹನೂರಿನ ಶ್ರೀ ವಿವೇಕಾನಂದ ಶಾಲೆಯ ವಿ.ಜೀವನ್ ದ್ವಿತೀಯ, 400 ಮೀ ನಲ್ಲಿ ಇದೇ ಶಾಲೆಯ ಕೆ.ಚಿರಾಗ್ ಪ್ರಥಮ ಸ್ಥಾನ ಪಡೆದಿದ್ದಾರೆ. 600 ಮೀ. ಓಟದ ಸ್ಪರ್ಧೆಯಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಮರಿಯಾ ಜೋಯಲ್ (ಪ್ರ), ಹನೂರಿನ ಶ್ರೀ ವಿವೇಕಾನಂದ ಶಾಲೆಯ ಸೋಹಾನ್ ಕುಮಾರ್ (ದ್ವಿ) ಸ್ಥಾನ ಪಡೆದಿದ್ದರೆ, 4*100 ರಿಲೆಯಲ್ಲಿ ಉನೈಜ್‌ಖಾನ್, ವಿ.ಜೀವನ್, ಕೆ.ಚಿರಾಗ್ ಹಾಗೂ ಸೋಹಾನ್ ಕುಮಾರ್ ತಂಡ ಪ್ರಥಮ ಸ್ಥಾನ ಪಡೆದಿದೆ. ಇನ್ನು ತಟ್ಟೆ ಎಸೆತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಮರಿಯಾ ಜೋಯಲ್ (ದ್ವಿ) ಸ್ಥಾನ ಗಳಿಸಿದ್ದಾರೆ.