ಜಿಲ್ಲೆ

ಕ್ರೀಡಾ ಗ್ರಾಮ ನಿರ್ಮಿಸುವ ಆಶಯ, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕಾಮಗಾರಿ ಪರಿಶೀಲಿಸಿದಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಲೋಹಿಯಾನಗರದಲ್ಲಿ ಸ್ಮಾರ್ಟ್ ಸಿಟಿ ಹಾಗೂ ಖೇಲೊ ಇಂಡಿಯಾ ಯೋಜನೆಗಳಡಿ ನಿಮಿರ್ಸಲಾಗುತ್ತಿರುವ ಕ್ರೀಡಾ ಸಂಕೀರ್ಣದಲ್ಲಿ ಹಾಕಿ, ಫುಟ್ಬಾಲ್ ಹಾಗೂ ವಾಲಿಬಾಲ್ ಅಂಕಣಗಳ ಕಾಮಗಾರಿ ಡಿಸೆಂಬರ್ ವೇಳೆಗೆ ರ್ಪೂಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಸುಮಾರು 166 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ಸಂಕೀರ್ಣದ ಪ್ರಗತಿಯನ್ನು ಬುಧವಾರ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂಕೀರ್ಣದ ಅರ್ಧದಷ್ಟು ಕೆಲಸ ಈಗ ರ್ಪೂಣಗೊಂಡಿದೆ. ಬ್ಯಾಡ್ಮಿಂಟನ್, ಈಜುಕೊಳ ಸೇರಿ ಇತರೆ ಒಳಾಂಗಣ ಕ್ರೀಡಾಂಗಣಗಳು ಬರುವ ವರ್ಷದ ಮೇ&- ಜೂನ್ ವೇಳೆಗೆ ರ್ಪೂಣಗೊಳ್ಳುವ ಸಾಧ್ಯತೆ ಇದೆ. 2024ರ ಜನೆವರಿಗೆ ಮೊದಲ ಹಂತದ ಕಾಮಗಾರಿ ಮುಗಿದು ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗಲಿದೆ ಎಂದರು.

ದೇಶಿಯ ಆಟಗಳನ್ನು ಒಳಗೊಂಡಂತೆ ಒಟ್ಟು 24 ಕ್ರೀಡೆಗಳಿಗೆ ಮೈದಾನಗಳನ್ನು ಇಲ್ಲಿ ನಿಮಿರ್ಸಲಾಗುವುದು. ಸುಮಾರು 15 ಎಕರೆ ಜಾಗದಲ್ಲಿ ತಲೆ ಎತ್ತಲಿರುವ ಕ್ರೀಡಾ ಸಂಕೀರ್ಣವನ್ನು ಕ್ರೀಡಾ ಗ್ರಾಮವಾಗಿ ಅಭಿವೃದ್ಧಿ ಪಡಿಸುವ ಆಲೋಚನೆ ಇದೆ ಎಂದರು.

ಜಾರ್ಖಂಡದಲ್ಲಿ ಕೋಲ್ ಇಂಡಿಯಾ ನೆರವಿನೊಂದಿಗೆ ಕ್ರೀಡಾ ಗ್ರಾಮ ಪರಿಕಲ್ಪನೆ ಜಾರಿಗೆ ತರಲಾಗಿದೆ. ಇಲ್ಲಿಯೂ ಸಹ ವಿದ್ಯಾಭ್ಯಾಸದ ಜತೆಗೆ ಮಕ್ಕಳಿಗೆ ಕ್ರೀಡಾ ತರಬೇತಿ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ ನೀಡುವುದು, ಶಾಲೆಗಳನ್ನು ನಿಮಿರ್ಸುವ ಯೋಜನೆ ಇದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ವಿವಿಧ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಕ್ರೀಡಾ ಸಂಕೀರ್ಣದ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಅವಧಿಯು 2024ರ ಏಪ್ರಿಲ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಅಷ್ಟರಲ್ಲಿ ಕಾಮಗಾರಿ ರ್ಪೂತಿಗೊಳಿಸುವ ನಿರೀಕ್ಷೆ ಇದೆ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಸ್ಮಾರ್ಟ್ ಸಿಟಿ ಯೋಜನೆಯ ಬಸವರಾಜು, ಇತರರು ಉಪಸ್ಥಿತರಿದ್ದರು.