ತಾವರಗೇರಾ: ಇಲ್ಲಿಗೆ ಸಮೀಪದ ಜುಮಲಾಪೂರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು, ವಲಯ ಮಟ್ಟದ ಕಬಡ್ಡಿ ಹಾಗೂ 800 ಮೀ.ಓಟದಲ್ಲಿ ಗೆಲವು ಸಾಧಿಸಿದ್ದಾರೆ.
ಇದನ್ನೂ ಓದಿ:http://ಕ್ರೀಡೆಯಲ್ಲಿ ಬಾಲಕಿಯರ ಗೆಲುವು
ದೋಟಿಹಾಳದ ಸರ್ಕಾರಿ ಪ.ಪೂ.ಕಾಲೇಜಿನ ಮೈದಾನದಲ್ಲಿ ನಡೆದ ವಿದ್ಯಾರ್ಥಿನಿಯರ ವಿಭಾಗದ ಕಬಡ್ಡಿಯಲ್ಲಿ, ಮಲ್ಲಿಕಾ ದಂಡಿನ ಎಂಬ ವಿದ್ಯಾರ್ಥಿನಿ 800 ಮೀಟರ್ ಓಟದಲ್ಲಿ ಸ್ಪರ್ಧಾಳಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದಳು.
ಜಮಲಾಪುರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ಸಾಧನೆಯನ್ನು, ಮುಖ್ಯ ಗುರುಗಳಾದ ಸೋಮನಗೌಡ ಪಾಟೀಲ್ ಹಾಗೂ ಎಸ್‌ಡಿಎಂಸಿಯ ಅಧ್ಯಕ್ಷ ಕನಕಪ್ಪ ನಾಯಕ್, ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು,
ಶಿಕ್ಷಕರು ಹಾಗೂ ಗ್ರಾಮದ ಕ್ರೀಡಾಭಿಮಾನಿ ಯುವಕರು ವಿಜೇತರಾದ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ತಂಡದ ಉಸ್ತುವಾರಿಯನ್ನು ಶಿಕ್ಷಕರಾದ ಹಂಪಯ್ಯ ಹಾಗೂ ತಂಡದ ವ್ಯವಸ್ಥಾಪಕರಾಗಿ ಶಿಕ್ಷಕಿ ಅಕ್ಕಮ್ಮ ಅರಳಿಕಟ್ಟಿ ವಹಿಸಿ ಕೊಂಡಿದ್ದರು.