ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆಯ ಸ್ಫೂರ್ತಿ ಮಹಿಳಾ ಘಟಕದ ವತಿಯಿಂದ ಆ.3 ಮತ್ತು 4ರಂದು ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಸಮುದಾಯ ಭವನದಲ್ಲಿ ‘ಸ್ಫೂರ್ತಿ ಉತ್ಸವ’ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ರಮಾದೇವಿ ಶ್ರೀಕಾಂತ್ ತಿಳಿಸಿದರು.
ಎರಡೂ ದಿನ ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಉತ್ಸವ ನಡೆಯಲಿದೆ. ಆ.3ರಂದು ಬೆಳಗ್ಗೆ 9.30ಕ್ಕೆ ಸುನಿತಾ ಚಂದ್ರಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉತ್ಸವದಲ್ಲಿ ಸ್ಯಾರಿ, ಸಲ್ವಾರ್, ಕುರ್ತಾ, ಆಭರಣ, ಗೃಹಾಲಂಕಾರ, ಅಡುಗೆ ಮನೆ ವಸ್ತುಗಳು, ಉಡುಗೊರೆ ವಸ್ತುಗಳು, ಕರಕುಶಲ ವಸ್ತು, ಆಹಾರ ಉತ್ಪನ್ನಗಳ ಮಳಿಗೆಗಳು ಇರಲಿವೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದಾಧಿಕಾರಿಗಳಾದ ಜಾಹ್ನವಿ ದಿನೇಶ್, ಕವಿತಾ ಗುರುರಾಜ್, ವೀಣಾ ಅಶೋಕ್, ಲಲಿತಾ ಶ್ರೀನಾಥ್ ಇದ್ದರು.