ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆಯ ‘ಸ್ಪೂರ್ತಿ’ ಮಹಿಳಾ ಘಟಕ ವತಿಯಿಂದ ಡಿ.24 ರಂದು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟದಲ್ಲಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ‘ಸ್ಪೂರ್ತಿ ಜಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಸ್ಪೂರ್ತಿ ಅಧ್ಯಕ್ಷೆ ರೇಖಾ ಯೋಗಾನರಸಿಂಹ ಹೇಳಿದರು.
ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ, ವ್ಯಾಪಾರ ಬೆಳಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಸ್ಪೂರ್ತಿ ಜಾತ್ರೆ ಹಮ್ಮಿಕೊಂಡಿದ್ದೇವೆ. ಈ ವಸ್ತು ಪ್ರದರ್ಶನದಲ್ಲಿ ಉಡುಪುಗಳು, ಆಭರಣ, ಫ್ಯಾಷನ್ ಮತ್ತು ಸೌಂದರ್ಯ ಪರಿಕರಣಗಳು, ಗೃಹಾಲಂಕಾರ, ಕುಂಬಾರಿಕೆ, ಹಸಿರು ಪರಿಕಲ್ಪನೆ, ಉಡುಗೊರೆ ಕಲಾಕೃತಿ, ಆಹಾರ ಉತ್ಪನ್ನ ಹಾಗೂ ಆಹಾರ ಮಳಿಗೆಗಳು ಇರಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಪೂರ್ತಿ ಪದಾಧಿಕಾರಿಗಳಾದ ಶಾಂತಿ ಭಾರದ್ವಾಜ್, ರೀನಾ ಪ್ರವೀಣ್‌ಪಾಲ್, ರಮಾ ಶ್ರೀಕಾಂತ್, ರಮ್ಯ ಲೋಕೇಶ್ ಇದ್ದರು.