ಜಿಲ್ಲೆ

ಸಮತೋಲನ ಆಹಾರ ಕುರಿತು ನಾಳೆ ವಿಶೇಷ ಉಪನ್ಯಾಸ ಕಾರ್ಯಕ್ರಮ

ಬಾಬುರಾವ ಯಡ್ರಾಮಿ


ಕಲಬುರಗಿ : ಇಲ್ಲಿನ ಕರುಣೇಶ್ವರ ನಗರದಲ್ಲಿರುವ ಸೋಲ್ಜರ್ ಜಿಮï ವತಿಯಿಂದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ವಿಶ್ವ ಆಹಾರ ಪೋಷಕಾಂಶ ಸಪ್ತಾಹ ಅಂಗವಾಗಿ ಸೆ.೬ ರಂದು ಬೆಳಿಗ್ಗೆ ೧೧ ಗಂಟೆಗೆ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಬಸವೇಶ್ವರ ಆಸ್ಪತ್ರೆಯ ಆಹಾರ ತಜ್ಞೆ  ಭುವನೇಶ್ವರಿ ಗಿರೀಶಕುಮಾರ 'ಸಮತೋಲನ ಆಹಾರ - ಸಧೃಡ ಶರೀರ '  ಕುರಿತು ಉಪನ್ಯಾಸ ನೀಡುವರು.ಅಧ್ಯP್ಷÀತೆ ಪ್ರಾಚಾರ್ಯ ಸಿದ್ದಪ್ಪ ಭಗವತಿ ವಹಿಸುವರು.  ಬಳಿಕ ಜರುಗುವ ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು.  ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನರು ಭಾಗಿಯಾಗುವಂತೆ ಜಿಮ್ ಮುಖ್ಯಸ್ಥ ಶರಣು ಎಸ್. ಹೆಚ್. ತಿಳಿಸಿದ್ದಾರೆ..