ಜಿಲ್ಲೆ

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ಪಿರುಲಿನಾ ಚಿಕ್ಕಿ

Tumakuru

ಪಾವಗಡ : ಅಪೌಷ್ಟಿಕ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೈಸರ್ಗಿಕವಾಗಿ ತಯಾರಿಸಿರುವ ಸ್ಪಿರುಲಿನಾ ಚಿಕ್ಕಿಯನ್ನು ತಾಲೂಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುವಾರ್ ಹೇಳಿದರು.

ತಿವ್ಮಾನಾಯ್ಕಪೇಟೆಯಲ್ಲಿ ಮಂಗಳವಾರ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರಶಿಶು ಅಭಿವೃದ್ಧಿಯೋಜನೆ, ಮೈಸೂರಿನ ಸಿಟಿಎಫ್‌ಆರ್‌ಐ, ತುಮಕೂರಿನ ಸ್ಪಿರುಲಿನಾ ೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪಿರುಲಿನಾ ಚಿಕ್ಕಿ ಹಾಗೂ ಮಕ್ಕಳ ತೂಕದ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೈಸೂರು ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಚಿಕ್ಕಿ ಸೇವಿಸಿ ಗುಣಮುಖರಾಗಿದ್ದಾರೆ. ಆದ್ದರಿಂದ ಸೋಂಕಿತರಿಗೆ ಚಿಕ್ಕಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ತಾಲೂಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಣೆ ವಾಡಲಾಗುತ್ತಿದೆ. ಚಿಕ್ಕಿ ಸೇವಿಸಿದ ನಂತರ ಮಕ್ಕಳ ತೂಕ ಮತ್ತು ಅವರ ಆರೋಗ್ಯವನ್ನು ಪರೀಕ್ಷಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶಾಸಕ ವೆಂಕಟರವಣಪ್ಪ ಮಾತನಾಡಿ, ತಾಯಂದಿರು ಪೌಷ್ಟಿಕ ಆಹಾರ ಸೇವಿಸಿದರೆ ಮಕ್ಕಳೂ ಆರೋಗ್ಯವಾಗಿರುತ್ತಾರೆ. ಅಂಗನವಾಡಿಗಳಲ್ಲಿ ವಿತರಿಸುವ ಚಿಕ್ಕಿಯನ್ನು ಮಕ್ಕಳಿಗೆ ತಿನ್ನಿಸಿಬೇಕು ಎಂದು ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಉಪನಿದೇರ್ಶಕ ಎಸ್.ನಟರಾಜು ಮಾತನಾಡಿ, ಸ್ತ್ರೀಶಕ್ತಿ ಸಂದ ಸದಸ್ಯರಿಂದ ಚಿಕ್ಕಿ ತಯಾರಿಸಿ ವಾರಾಟ ವಾಡುವ ಯೋಜನೆಯು ಇದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಆಯ್ದ ಸೀಶಕ್ತಿ ಸಂಘಗಳ ಸದಸ್ಯರಿಗೆ ತರಬೇತಿ ನೀಡಲಾಗುವುದು ಎಂದರು.

ಎಸಿ ಡಾ.ನಂದಿನಿದೇವಿ, ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್, ಜಿಪಂ ಸದಸ್ಯ ಚೆನ್ನಮಲ್ಲಯ್ಯ, ತಾಪಂ ಉಪಾಧ್ಯಕ್ಷ ಐ.ಜೆ.ನಾಗರಾಜು, ಸಿಡಿಪಿಒ ಶಿವಕುವಾರಯ್ಯ, ತಹಸೀಲ್ದಾರ್ ಡಿ.ವರದರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ತಿರುಪತಯ್ಯ, ಎಸ್.ಐ.ನಾಗರಾಜು, ಮೇಲ್ವಿಚಾರಕರಾದ ಮಣಿ, ಜಯಲಕ್ಷ್ಮೀ, ಮಮತಾ, ಅಂಗವಾಡಿ ಕಾರ್ಯಕರ್ತರಾದ ಸುಶೀಲಮ್ಮ, ಶಾರದಮ್ಮ ಇದ್ದರು.