ನರಗುಂದ: ಕಾನೂನುಗಳು ಆಧ್ಯಾತ್ಮದ ಆಯಾಮ ಹೊಂದಿರುವಂತೆಯೇ, ಆಧ್ಯಾತ್ಮಿಕತೆಯೂ ತನ್ನದೇ ಕಾನೂನುಗಳನ್ನು ಹೊಂದಿದೆ ಎಂದು ದಿವಾಣಿ ನ್ಯಾಯಾಧೀಶ ಜೀನಪ್ಪ ಚೌಗಲಾ ಹೇಳಿದರು.
ಪಟ್ಟಣದ ಈಶ್ವರೀಯ ವಿದ್ಯಾಲಯದಿಂದ 89ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಮತ್ತು ಅಧ್ಯಾತ್ಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳಿಯಾಳದ ಈಶ್ವರೀಯ ವಿದ್ಯಾಲಯದ ಡಾ. ರಾಜಯೋಗಿನಿ ಪದ್ಮಾಜಿ ಅಕ್ಕನವರು, ಬಾಗಲಕೋಟೆ ಜೆಎಂಎಫ್‌ಸಿ ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ತಿಳಿಗಂಜಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ವಿ.ಎಸ್. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಹಿರಿಯ ವಕೀಲ ಎಫ್.ವೈ. ದೊಡಮನಿ, ವಕೀರಾದ ಎಸ್.ಕೆ. ಹರಪನಹಳ್ಳಿ, ಆರ್.ಎಸ್. ನಾಯ್ಕರ್, ಕೆ.ಎಸ್. ಹೂಲಿ, ಚಂದ್ರಗೌಡ ಪಾಟೀಲ, ಶೋಭಾ ತಿಳಗಂಜಿ, ಎಸ್.ವಿ. ಹುಲ್ಲೂರ, ಪ್ರಸನ್ನ ಗುಜಮಾಗಡಿ, ಪ್ರಶಾಂತ ಜೋಶಿ, ಬಿ.ಕೆ. ಗುಜಮಾಗಡಿ, ವಿ.ಎನ್. ಕೊಳ್ಳಿಯವರ, ವಿ.ಎಸ್. ವೀರನಗೌಡ್ರ, ಬಸವರಾಜ ವಡ್ಡರ, ಈಶ್ವರೀಯ ವಿವಿ ಸಂಚಾಲಕಿ ಪ್ರಭಕ್ಕ, ಇತರರಿದ್ದರು. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಬಣಕಾರ ಅವರನ್ನು ಸನ್ಮಾನಿಸಲಾಯಿತು. ಅರವಿಂದ ಮೇಗೂರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹನುಮಂತ ಮಾದರ ನಿರ್ವಹಿಸಿದರು.