ಮಹಾಶಿವರಾತ್ರಿ ಪಾವನ ಪರ್ವದ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಶಾಖೆ ಸಹಯೋಗದಲ್ಲಿ ಕದ್ರಿ ಮೈದಾನದಲ್ಲಿ ನಡೆದ ಸಹಸ್ರಲಿಂಗ ದರ್ಶನ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಬದುಕಿಗೆ ಆಧ್ಯಾತ್ಮದ ಜ್ಞಾನ ಅಗತ್ಯ

Mangaluru - Shravan Kumar Nala

ಮಂಗಳೂರು: ಮನುಷ್ಯ ಸರ್ವರೀತಿಯಲ್ಲಿ ಯಶಸ್ಸು ಗಳಿಸಬೇಕಾದರೆ ಧರ್ಮದ ನಡೆಯಲ್ಲೇ ಬದುಕಬೇಕು. ಬದುಕಿನ ಯಶಸ್ಸಿಗೆ ಆಧ್ಯಾತ್ಮದ ಜ್ಞಾನವೇ ಮೂಲ ಎಂದು ಕದ್ರಿ ಶ್ರೀ ಮಂಜುನಾಥ ದೇವಾಲಯದ ಅರ್ಚಕ ಕೃಷ್ಣ ಅಡಿಗ ಹೇಳಿದರು.

ಮಹಾಶಿವರಾತ್ರಿ ಪಾವನ ಪರ್ವದ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಶಾಖೆ ಸಹಯೋಗದಲ್ಲಿ ಕದ್ರಿ ಮೈದಾನದಲ್ಲಿ ನಡೆದ ಸಹಸ್ರಲಿಂಗ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧ್ಯಾತ್ಮದ ಆಳಕ್ಕೆ ಹೋದಂತೆ ಜೀವನ ಜೀವನ ಶೂನ್ಯ ಎಂಬತ್ತಾಗಿ ಪರಮಾತ್ಮನೇ ಶ್ರೇಷ್ಟ ಎಂಬತ್ತಾಗುತ್ತದೆ. ಪರಮಾತ್ಮನೇ ಶ್ರೇಷ್ಟ ಎಂಬ ಜ್ಞಾನ ಲಭಿಸುವುದೇ ಜೀವನ. ಲೌಕಿಕವಾದ ಜೀವನಕ್ಕೆ ಆಧ್ಯಾತ್ಮದ ಆಸರೆ ಅಗತ್ಯವಾಗಿ ಬೇಕು, ಈ ಮೂಲಕ ಜೀವನದಲ್ಲಿ ಅಂತಿಮ ಆಧ್ಯಾತ್ಮಿಕ ಸುಖ ಪಡೆಯಲು ಸಾಧ್ಯವಿದೆ. ಜೀವನದಲ್ಲಿ ಸಿಗುವ ಲೌಕಿಕ ಸುಖಗಳು ತಾತ್ಕಾಲಿಕ, ಇದೊಂದು ನೀರಮೇಲಿನ ಗುಳ್ಳೆಯಂತೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಸಾವಿರಾರು ಜನ ಆಧ್ಯಾತ್ಮದ ಜ್ಞಾನ ಪಡೆಯುತ್ತಿದ್ದು, ಇದೊಂದು ದೈವಿ ಕಾರ್ಯವಾಗಿ ಮೂಡಿಬರುತ್ತಿದೆ. ಇಂತಹ ಕಾರ್ಯಗಳು ಮುಂದೆಯೂ ಹೆಚ್ಚೆಚ್ಚು ನಡೆಯಲಿ ಎಂದರು.

ಬ್ರಹ್ಮ ಕುಮಾರಿ ಅಂಬಿಕಾ ಮಾತನಾಡಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಆಧ್ಯಾತ್ಮದ ಜಾಗೃತಿ, ಮನುಷ್ಯನ ಕಾರ್ಯ ಕರ್ತವ್ಯಗಳ ಬಗ್ಗೆ, ಪರಮಾತ್ಮನ ಪರಿಚಯ ಹಾಗೂ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಂದು ಈ ವಿದ್ಯಾಲಯವು ಅಂತರಾಷ್ಟ್ರೀಯ ಸಂಸ್ಥೆಯಾಗಿ ಸುಮಾರು 10 ಸಾವಿರ ಶಾಖೆಗಳು ಪ್ರಪಂಚದಾಧ್ಯಂತ ಕಾರ್ಯನಿರ್ವಹಿಸುತ್ತಿದೆ. ಧರ್ಮ ಚಿಂತನೆ, ಆಧ್ಯಾತ್ಮಿಕ ಜಾಗೃತಿಯೇ ವಿದ್ಯಾಲಯದ ಪ್ರಮುಖ ಉದ್ದೇಶವಾಗಿದೆ ಎಂದರು.

ತುಳು ಜಾನಪದ ವಿದ್ವಾಂಸರಾದ ಕೆ.ಕೆ ಪೇಜಾವರ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸೋದರಿ ವಿಶ್ವೇಶ್ವರಿ, ಬ್ರಹ್ಮ ಕುಮಾರಿ ಅಂಬಿಕಾ, ಬ್ರಹ್ಮ ಕುಮಾರ್ ಅಶೋಕ್ ಸಹಿತ ಹಲವರಿದ್ದರು.

ಬ್ರಹ್ಮ ಕುಮಾರಿ ಸ್ನೇಹ ಸ್ವಾಗತಿಸಿದರು. ಬ್ರಹ್ಮ ಕುಮಾರಿ ಜಯ ಕಾರ್ಯಕ್ರಮ ನಿರೂಪಿಸಿದರು.

----------------

ಮಹಾಶಿವರಾತ್ರಿ ಪ್ರಯುಕ್ತ ಕದ್ರಿ ಮೈದಾನದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ೆ.24ರಿಂದ 28ರ ವರೆಗೆ ಬೆಳಗ್ಗೆ 7ರಿಂದ 8ರ ವರೆಗೆ ಹಾಗೂ 6ರಿಂದ 7ರ ವರೆಗೆ ಶಿವಧ್ಯಾನ ಶಿಬಿರ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ ನಡೆಯಲಿದೆ. ಜತೆಗೆ ಸಹಸ್ರಲಿಂಗ ದರ್ಶನ, ರಾಜಯೋಗ ಚಿತ್ರಪ್ರದರ್ಶನ, ಕಾಲಚಕ್ರದ ಅರಿವಿನ ಚಕ್ರ ವೀಕ್ಷಣೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ಶಾಖೆ ಸಂಚಾಲಕಿ ಸೋದರಿ ವಿಶ್ವೇಶ್ವರಿ ತಿಳಿಸಿದ್ದಾರೆ.