ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಭಾವನಾತ್ಮಕ ಬುದ್ಧಿಮತ್ತೆ: ಡಾ.ಎಂ.ಎಸ್.ಮೂಡಿತ್ತಾಯ ಆಶಯ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ದೇಶದ ಹೃದಯ ಎಂದೆನಿಸಿದ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಬುದ್ಧಿಮತ್ತೆಯನ್ನು ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಸಾಧನೆಗೈಯಬಹುದು. ಸತ್ಪ್ರಜೆಗಳಾಗಿ ಜಾಗತಿಕ ಮಟ್ಟದಲ್ಲಿ ದೊರೆಯುವ ಅವಕಾಶಗಳ ಬಗ್ಗೆ ಆಲೋಚಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಹೇಳಿದರು.

ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ 12ನೇ ವರ್ಷದ ವಾರ್ಷಿಕೋತ್ಸವ ಸವಾರಂಭವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ, ಶಿಕ್ಷಣದ ಜತೆಗೆ ಶೂನ್ಯ ತ್ಯಾಜ್ಯ ಕ್ಯಾಂಪಸ್‌ನಂತಹ ಮೌಲಿಕ ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಿ ವಿದ್ಯಾರ್ಥಿ ಜೀವನಕ್ಕೆ ಶ್ರೇಷ್ಠ ಪಥವನ್ನು ಎಕ್ಸಲೆಂಟ್ ಸಂಸ್ಥೆ ಹಾಕಿಕೊಟ್ಟಿದೆ ಎಂದರು.

ಮಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ(ಪದವಿಪೂರ್ವ) ನಿರ್ದೇಶಕ ಜಯಣ್ಣ ಮುಖ್ಯ ಅತಿಥಿಯಾಗಿದ್ದರು. ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಆಫ್ನಾನ್ ಬೇಗ್ ಮತ್ತು ಅನೀಶ್ ಗಣಪತಿ ದೇಸಾಯಿ ಬರೆದ ಕಾದಂಬರಿಗಳಾದ ‘ಇನ್ಸೋಲೈಟ್’ ಮತ್ತು ‘ಲೈಫ್ ಇನ್ ಅ ಬ್ಲಾಕ್ ಹೋಲ್’ ಬಿಡುಗಡೆಗೊಳಿಸಲಾಯಿತು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಸ್ಪರ್ಧಾತ್ಮಕ ಪರೀಕ್ಷಾ ವಿಭಾಗ ನಿರ್ದೇಶಕ ಡಾ.ಪ್ರಶಾಂತ ಹೆಗ್ಡೆ, ಪೂರ್ವ ವಿದ್ಯಾರ್ಥಿನಿ ಆತಿರಾ ಮೆನನ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರದೀಪ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ಮನೋಜ್ ಕುವಾರ್ ಸ್ವಾಗತಿಸಿದರು. ಉಪನ್ಯಾಸಕಿಯರಾದ ಶ್ರದ್ಧಾ ಮತ್ತು ವಿಲ್ಮಾ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು. ವಿಶ್ವರಾಜ್, ಸೌಮ್ಯಾ, ಅಶ್ವಿತಾ ರೈ ಅತಿಥಿಗಳನ್ನು ಪರಿಚಯಿಸಿದರು. ವಿಕ್ರಮ ನಾಯಕ್ ನಿರೂಪಿಸಿದರು. ವಿದ್ಯಾರ್ಥಿ ನಾಯಕ ರೋಹಿತ್ ಕಾಮತ್ ವಂದಿಸಿದರು.

ಸಾಧನೆಯ ಹಾದಿಯಲ್ಲಿ ಕೆಲವೊಮ್ಮೆ ನಿಮಗೆ ಸೋಲಾದಾಗ ನಿರಾಸೆಗೊಳ್ಳುವ ಅಗತ್ಯವಿಲ್ಲ. ಸತತ ಪರಿಶ್ರಮದಿಂದ ಸಾಧನೆ ಸಾಧ್ಯ. ಸಾಧಕ ವಿದ್ಯಾರ್ಥಿಗಳು, ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸಿದ ಶಿಕ್ಷಕ ಶಿಕ್ಷಕೇತರರ ಶ್ರಮ ಅಭಿನಂದನೀಯ. - ಯುವರಾಜ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಸಂಸ್ಥೆ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆಂದು ಬಯಸಿದ್ದೆ. ಆದರೆ ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ವಾಡುತ್ತಿದ್ದು, ಶಿಕ್ಷಕಿ ಆಗುವ ಗುರಿಯಿದೆ. ನನ್ನೆಲ್ಲಾ ಏಳಿಗೆಗೂ ಮೊದಲ ಹೆಜ್ಜೆಯಾಗಿದ್ದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ. - ಆತಿರಾ ಮೆನನ್, ಎಕ್ಸಲೆಂಟ್ ಪಿ.ಯು. ಕಾಲೇಜು ಪೂರ್ವ ವಿದ್ಯಾರ್ಥಿನಿ https://www.vijayavani.net/ayyappa-bhajan-festival-in-parakkila-constituency-on-14th https://www.vijayavani.net/jalbhagya-for-chinganigudde-tank