ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಕಳ ವಲಯ ರೋಟರಿ ಕ್ಲಬ್ ಸಂಯೋಜಕಿ ಜ್ಯೋತಿ ಪದ್ಮನಾಭ್ ಅಮರ ಜವಾನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು 
ಜಿಲ್ಲೆ

ಭಾರತೀಯ ಸೈನಿಕಲ್ಲಿ ಸಮರ್ಪಣಾ ಭಾವ : ಪದಗ್ರಹಣ ಸಮಾರಂಭದಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಅಭಿಮತ

ಕಾರ್ಕಳ: ನಮ್ಮ ಸೈನಿಕರು ನಮ್ಮ ಹೆಮ್ಮೆ, ಭಾರತೀಯ ಸೈನಿಕರಿಗೆ ಇರುವಷ್ಟು ಸಾಮರ್ಥ್ಯ ಹಾಗೂ ಸಮರ್ಪಣಾ ಮನೋಭಾವ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ, ಸೈನಿಕರು ತಮ್ಮ ಕರ್ತವ್ಯ ನಿಷ್ಠೆ ನಿರ್ವಹಿಸುವುದರಿಂದ ದೇಶ ಶಾಂತಿಯುತವಾಗಿ ನಿದ್ರಿಸುತ್ತದೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

ಕಾರ್ಕಳ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇಂಟರ‌್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಹಾಗೂ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ವಲಯ ರೋಟರಿ ಕ್ಲಬ್ ಸಂಯೋಜಕಿ ಜ್ಯೋತಿ ಪದ್ಮನಾಭ್ ಅಮರ ಜವಾನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್, ಕಾರ್ಕಳ ರೋಟರಿ ಕ್ಲಬ್ ಕಾರ್ಯದರ್ಶಿ ಗಣೇಶ್ ಸಾಲ್ಯಾನ್, ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಕಳ ರೋಟರಿ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು. ಇಂಟರ‌್ಯಾಕ್ಟ್ ಅಧ್ಯಕ್ಷ ಅನುಷ್ ಡಿ.ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಸ್ವಾಗತಿಸಿ, ಇಂಟರ‌್ಯಾಕ್ಟ್ ಕಾರ್ಯದರ್ಶಿ ವಿಶೋನ್ ಶೆಲ್ಟನ್ ಸಲ್ಡಾನ್ಹ ವಂದಿಸಿದರು.