ವಿಜಯಪುರದ ಅಲ್​ ಅಮೀನ್​ ಆಸ್ಪತ್ರೆಯಲ್ಲಿ ವಿಶ್ವ ಬೆನ್ನಹುರಿ ಅಪಘಾತ ದಿನಾಚರಣೆ ಹಿನ್ನೆಲೆ ಬೆನ್ನು ಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ಮತ್ತು ವ್ಯಾಯಾಮ ತರಬೇತಿ ನೀಡಲಾಯಿತು. ಡಾ. ಜಿಲಾಣಿ ಅವಟಿ, ಸವಿತಾ ಕಾಳೆ, ಫಾದರ್​ ಟಿಓಲ್​ ಮಚಾದೋ ಮತ್ತಿತರರಿದ್ದಾರೆ. 
ಜಿಲ್ಲೆ

ಬೆನ್ನು ಹುರಿ ಆರೋಗ್ಯ ತಪಾಸಣೆ

ವಿಜಯಪುರ: ನಗರದ ಅಲ್​&ಅಮೀನ್​ ಆಸ್ಪತ್ರೆಯಲ್ಲಿ ಸೋಮವಾರ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆ ಹಿನ್ನೆಲೆ ಮೂರು ದಿನಗಳ ಕಾಲ ಬೆನ್ನು ಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ಮತ್ತು ವ್ಯಾಯಾಮ ತರಬೇತಿ ನಡೆಯಿತು.

ವಿಜಯಪುರದ ದಿ. ಅಸೋಸಿಯೇಷನ್​ ಆಫ್​ ಪೀಪಲ್​ ವಿತ್​ ಡಿಸೇಬಿಲಿಟಿ (ಎಪಿಡಿ) ಸಂಸ್ಥೆ, ಎಚ್​ಸಿಎಲ್​ ಫೌಂಡೇಶನ್​, ಅಲ್​ ಅಮೀನ್​ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ, ರಾಜ್ಯ ಬೆನ್ನು ಹುರಿ ಅಪಘಾತದ ಅಂಗವಿಕಲರ ಸಂ ಮತ್ತು ಅನೌಪಾಚಾರಿಕ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಲ್​ ಅಮೀನ್​ ಆಸ್ಪತ್ರೆ ಸುಪರಿಂಟೆಂಡೆಂಟ್​ ಡಾ. ಜಿಲಾಣಿ ಅವಟಿ ಮಾತನಾಡಿ, ಬೆನ್ನುಹುರಿ ಅಪಘಾತ ಆದ ವ್ಯಕ್ತಿಗಳನ್ನು ಹೊರ ತರಲು ಹಾಗೂ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಉದ್ಯೋಗ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಕಳೆದ 12 ವರ್ಷಗಳಿಂದ ಎಪಿಡಿ ಸಂಸ್ಥೆ ಮಾಡುತ್ತಿದೆ.

ತಹ ಉತ್ತಮ ಕಾರ್ಯಕ್ಕೆ ನಮ್ಮ ಸಂಸ್ಥೆಯಿಂದಲೂ ಎಪಿಡಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ಮುಂದೆಯೂ ಸಹ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾ ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಸವಿತಾ ಕಾಳೆ ಮಾತನಾಡಿ, ಅಂಗವಿಕಲರಲ್ಲಿ ಅಗಾಧವಾದ ಪ್ರತಿಭೆ ಅಡಗಿರುತ್ತದೆ. ಅವರಿಗೆ ಅನುಕಂಪ ಬದಲಾಗಿ ಅವಕಾಶ ನೀಡಬೇಕು. ಅಂಗವಿಕಲರು ಮಾನಸಿಕವಾಗಿ ಸದೃಢರಿದ್ದು, ಎಲ್ಲ ಕೆಲಸಗಳನ್ನು ಮಾಡುವ ಛಲ ಅವರಲ್ಲಿರುತ್ತದೆ.

ಅಂಗವಿಕಲರು ನಿಮ್ಮ ಏನೇ ಕೆಲಸ ಕಾರ್ಯಗಳಿದ್ದರೆ ನನ್ನನ್ನು ಖುದ್ದಾಗಿ ಭೇಟಿ ಮಾಡಲು ಮನವಿ ಮಾಡಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್​ ಟಿಓಲ್​ ಮಚಾದೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 30 ಜನರಿಗೆ ನ್ಯೂಟ್ರೇಶನ್​ ಫುಡ್​ ವಿತರಿಸಲಾಯಿತು. ರೇಮೆನ್​ ಫೌಂಡೇಶನ್​ ಸಂಸ್ಥೆ ವತಿಯಿಂದ ಒಬ್ಬ ಅಂಗವಿಕಲನಿಗೆ ಧನ ಸಹಾಯ ಮತ್ತು ಬೆನ್ನುಹುರಿ ಅಪಘಾತ ವಿಕಲಚೇತನರ ಸಂದ ವತಿಯಿಂದ ಇಬ್ಬರಿಗೆ ಸ್ವ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ ಮಾಡಲಾಯಿತು.

ಸಿಸ್ಟರ್​ ಅಮಲಾ, ಡಾ. ಶಾಹೀನಾ ಕುಡಚಿ, ಡಾ. ಅಬಜೀತ ಮುಲ್ಲಾ, ಈರಮ್ಮ ಹಾದಿಮನಿ, ಸುನೀತಾ ರಾಠೋಡ, ಕುಶಾಲ ವಾಲಿಕಾರ ಮತ್ತಿತರರಿದ್ದರು