ಕುಂದಾಪುರ: ವಿಜಯ ಗ್ರಾಮೀಣ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಆಲೂರು ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟ ಇವರ ಆಯೋಜನೆಯಲ್ಲಿ 6 ದಿನಗಳ ವಿವಿಧ ಮಸಾಲಾ ಪದಾರ್ಥಗಳ ತರಬೇತಿಯ ಸವಾರೋಪ ಸವಾರಂಭ ಆಲೂರಿನ ಕಾಳಿಕಾಂಬ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು.
ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಶುಭ ಹಾರೈಸಿದರು. ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ದೇವಾಡಿಗ, ತರಬೇತುದಾರೆ ಹೇವಾ ಜಗನ್ನಾಥ, ಬಿವಿಟಿಯ ರಾವೇಂದ್ರ ಆಚಾರ್ಯ, ವಿಶ್ವಕರ್ಮ ಸಮುದಾಯ ಭವನದ ಕಾರ್ಯದರ್ಶಿ ಉಮೇಶ್ ಆಚಾರ್, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಅನುಸೂಯ, ಆಸನ ಮತ್ತು ಧ್ವನಿ ವರ್ಧಕ ವ್ಯವಸ್ಥೆಗೆ ಸಹಕಾರ ನೀಡಿದ ಸಂದೀಪ್ ಆಚಾರ್ಯ ಉಪಸ್ಥಿತರಿದ್ದರು. ವಿಜಯ ಪ್ರತಿಷ್ಠಾನ ಸಿಬ್ಬಂದಿ ಪಂಡರಿನಾಥ್ ಎಂಬಿಕೆ, ಎಲ್‌ಸಿಆರ್‌ಪಿ ಸಹಕರಿಸಿದರು. ವೀಣಾ ಆಚಾರ್ಯ ಸ್ವಾಗತಿಸಿ, ಚೈತ್ರಾ ಆಚಾರ್ಯ ವಂದಿಸಿದರು. ಪೂರ್ಣಿವಾ ನಿರೂಪಿಸಿದರು.