ಜಿಲ್ಲೆ

ಸ್ಪೀಡ್ ರೋಲರ್ ಸ್ಕೇಟಿಂಗ್ ಸ್ಪರ್ಧೆ

Dharwada - Basavaraj Idli

ಹುಬ್ಬಳ್ಳಿ: ನಗರದ ರೋಲರ್ ಸ್ಕೇಟಿಂಗ್ ಅಕಾಡೆಮಿ ಸಹಯೋಗದೊಂದಿಗೆ ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ ಇಲ್ಲಿಯ ಇಂದಿರಾ ಗಾಜಿನಮನೆ ಆವರಣದ ಮೈದಾನದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಮುಕ್ತ ಸ್ಪೀಡ್ ರೋಲರ್ ಸ್ಕೇಟಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿವಿಧ ವಯೋಮಾನದವರಿಗಾಗಿ ಬೇರೆಬೇರೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಕ್ವಾಡ್, ಇನ್ಲೈನ್ ಸ್ಕೇಟಿಂಗ್ನಲ್ಲಿ ಜಿಲ್ಲೆಯ ವಿವಿಧೆಡೆಯಿಂದ 60ಕ್ಕೂ ಹೆಚ್ಚು ಸ್ಕೇಟರ್ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು.

ಆಗಾಗ ಮಳೆಯ ಅಡ್ಡಿ ನಡುವೆಯೂ ಸ್ಪಧಿರ್ಗಳು ಉತ್ಸಾಹದಿಂದ ಭಾಗವಹಿಸಿದ್ದರು. ಸ್ಕೇಟಿಂಗ್ ರಿಂಕ್ ತೊಯ್ದಿದ್ದರಿಂದ ಕೆಲಹೊತ್ತು ಸ್ಪರ್ಧೆ ಸ್ಥಗಿತಗೊಳಿಸಲಾಗಿತ್ತು.

ನಂತರ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅತಿಥಿಯಾಗಿದ್ದ ಪೊಲೀಸ್ ಅಧಿಕಾರಿ ಈರಪ್ಪ ವಾಲಿ ಅವರು ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ದೊಡ್ಡದು. ಕ್ರೀಡಾ ಸಾಧನೆ ಮಾಡಬೇಕಾದರೆ ಅವರ ಶ್ರಮವೂ ಬಹಳಷ್ಟಿರುತ್ತದೆ ಎಂದರು.

ಇಂಜಿನಿಯರ್ ಸುಶೀಲಕುಮಾರ ಮಾತನಾಡಿದರು.
ಧಾರವಾಡ ಜಿಲ್ಲಾ ಅಸೋಸಿಯೇಶನ್ ಕಾರ್ಯದರ್ಶಿ ಮಲ್ಲಿಕಾರ್ಜುನ ಕಾಡಪ್ಪನವರ ನೇತೃತ್ವ ವಹಿಸಿದ್ದರು. ಸ್ಕೇಟಿಂಗ್ ತರಬೇತಿದಾರರಾದ ಶಶಿಧರ ಪಾಟೀಲ, ಅಕ್ಷಯ ಸೂರ್ಯವಂಶಿ, ವಿರೂಪಾಕ್ಷ ಕಮ್ಮಾರ, ಜತಿನ್, ಅಂಕುಶ, ಇತರರು ಉಪಸ್ಥಿತರಿದ್ದರು.