ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ವಿನಾಯಕ ಚಿತ್ರಮಂದಿರದ ಮುಂಭಾಗದ ಛಾವಣಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಸೆಕೆಂಡ್ ಶೋ ಆರಂಭಗೊAಡ ಕೆಲವೇ ನಿಮಿಷದಲ್ಲಿ ಏಕಾಏಕಿ ಕುಸಿದಿದೆ. ಅದೃಷ್ಟವಶಾತ್ ಪವಾಡ ಸದೃಶವಾಗಿ ದೊಡ್ಡ ಅನಾಹುತ ತಪ್ಪಿದೆ.
ಅಷ್ಟರಲ್ಲಾಗಲೇ ಪ್ರೇಕ್ಷಕರು ಟಿಕೆಟ್ ಪಡೆದು ಥಿಯೇಟರ್ ಒಳಗಡೆ ಸೇರಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ಆದರೆ ಟಾಕೀಸಿನ ಮುಂಭಾಗದಲ್ಲಿ ನಿಲ್ಲಿಸಿದ್ದ 12 ದ್ವಿಚಕ್ರ ವಾಹನಗಳು ಕಟ್ಟಡದ ಅವಶೇಷಗಳ ಅಡಿಗೆ ಸಿಲುಕಿ ನುಜ್ಜುಗುಜ್ಜಾಗಿವೆ. ಈ ಚಿತ್ರಮಂದಿರದಲ್ಲಿ ಈಚೆಗೆ ಬಿಡುಗಡೆಯಾದ ಜೈಲರ್ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.
ಚಿತ್ರಮಂದಿರದ ಮುಂಭಾಗ ಶಿಥಿಲಗೊಳ್ಳುತ್ತಿದ್ದು ಅಪಾಯಕಾರಿ ಸ್ಥಿತಿಯಲ್ಲಿರುವ ಕಾರಣ ಕಟ್ಟಡದ ನವೀಕರಣವಾಗುವವರೆಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದು ಸುರಕ್ಷಿತವಲ್ಲ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ವರ್ಷ ಮೇ 13ರಂದು ಜಿಲ್ಲಾಽಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಡಳಿತದ ವಿರುದ್ಧವೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದಾಗಿ ಚಿತ್ರಮಂದಿರದ ಪಾಲುದಾರರಲ್ಲಿ ಒಬ್ಬರಾದ ಕೆ.ಗಣೇಶ್ ಕಾಮತ್ ತಿಳಿಸಿದ್ದಾರೆ.