ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶರೀರ ವಿಾನ ವಿಭಾಗದ ಯೋಗ ಮತ್ತು ವ್ಯಾಯಾಮ ವಿಾನ ಕೇಂದ್ರದಲ್ಲಿ ಯೋಗ ಸಂಗಮ&ಯೋಗ ಸಮಾವೇಶ ಶೀರ್ಷಿಕೆಯಡಿ 12 ದಿನಗಳ ವಿಶೇಷ ಯೋಗ ಕಾರ್ಯಕ್ರಮ ಬುಧವಾರ ಆರಂಭಗೊಂಡಿತು.
ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಕೇಂದ್ರ ಆಯುಷ್ ಸಚಿವಾಲಯ ಸಹಯೋಗದಲ್ಲಿ ಪ್ರಾರಂಭವಾದ ಶಿಬಿರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ವೈದ್ಯಕಿಯ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಉತ್ತೇಜಿಸುವ ನಿಟ್ಟಿನಲ್ಲಿ ಸಾಮಾನ್ಯ ಯೋಗ ತರಬೇತಿ ಶಿಬಿರ ನಡೆಯುತ್ತಿದೆ.
ಯೋಗ ಶಿಕ ಮಡಿವಾಳಪ್ಪ ದೊಡ್ಡಮನಿ ಮತ್ತು ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ ವೈದ್ಯಕಿಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಜೂ. 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಒಂದು ಭೂಮಿ, ಒಂದು ಆರೋಗ್ಯ ಎಂಬ ೂಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.