ಅಳವಂಡಿ: ಗ್ರಾಮದ ಶ್ರೀಕೃಷ್ಣ ದೇವಸ್ಥಾನದ ಬಳಿ ಶ್ರೀಕೃಷ್ಣ ಗೊಲ್ಲರ ಸಮಾಜ ಸೇವಾ ಸಮಿತಿ ಹಾಗೂ ಗ್ರಾಮಸ್ಥರಿಂದ ಭಾನುವಾರ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಕೃಷ್ಣನ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಕೃಷ್ಣನ ಕುರಿತಾದ ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು. ಮಡಿಕೆ ಒಡೆಯುವುದು ಸೇರಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಪ್ರಮುಖರಾದ ಯಲ್ಲಪ್ಪ ಕರಡಿ, ಹನುಮಪ್ಪ ಮಂಡಲಗೇರಿ, ಯಂಕಪ್ಪ ಕರಡಿ, ಶಿವಗ್ಯಾನಪ್ಪ ನೀಲಿಹಿಂಡರ, ಮಾರುತಿ ಮಾಕಾಳಿ, ಯಂಕಪ್ಪ ನಿಲಿಹಿಂಡರ, ಪರಮೇಶಪ್ಪ ಕರಡಿ, ಗ್ಯಾನಪ್ಪ ಗುನ್ನಳ್ಳಿ, ಮಂಜುನಾಥ ಕಾಗಿ, ಶಂಕ್ರಪ್ಪ ಕರಡಿ, ರಮೇಶ ಕರಡಿ, ರಘು ಕಟಗಾಲಿ, ನಾಗರಾಜ ಗುನ್ನಳ್ಳಿ, ಕೃಷ್ಣ ಬೆಳಗಿ, ಮಲ್ಲಪ್ಪ, ಯಂಕನಗೌಡ, ಯಂಕಣ್ಣ, ಅಂಜನಪ್ಪ, ರಾಜಪ್ಪ, ಕೇಶಪ್ಪ, ಮಾರುತೇಶ ಇತರರಿದ್ದರು.