ಕವಲೂರು: ಹೊರವಲಯದ ಶ್ರೀ ಕಟ್ಟೆ ದುರ್ಗಮ್ಮದೇವಿ ದೇವಸ್ಥಾನದಲ್ಲಿ ಶ್ರಾವಣ ಮಂಗಳವಾರ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನವನ್ನು ತಳಿರು-ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ದೇವಿಗೆ ಪೂಜೆ, ನೈವೇದ್ಯ, ಉಡಿ ತುಂಬಿ ಭಕ್ತಿ ಸಮರ್ಪಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ಭಕ್ತರಿಗೆ ಕುಡಿವ ನೀರಿನ ಅನುಕೂಲಕ್ಕಾಗಿ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು. ಪ್ರಮುಖರಾದ ಕರಿಯಪ್ಪ ಎಮ್ಮಿ, ಶರಣಪ್ಪ ಮುಕ್ಕಣ್ಣವರ, ಪಕೀರಪ್ಪ ಎಲಿಗಾರ, ಗವಿಸಿದ್ದಪ್ಪ, ನಾಗಪ್ಪ ಜೋಗಿ, ಹುಸೇನ್‌ಸಾಬ್, ಹೊನ್ನಪ್ಪ, ಮೌಲಾಸಾಬ್, ನಾಗಪ್ಪ ಕಗ್ಗಲ್, ವೀರಣ್ಣ ಕುರುವತ್ತಿ, ರವಿ ಉಪ್ಪಾರ, ಬಸಣ್ಣ ಶಿದ್ನೆಕೊಪ್ಪ, ಸುಭಾಷ್ ಇತರರಿದ್ದರು.